alex Certify
ಕನ್ನಡ ದುನಿಯಾ       Mobile App
       

Kannada Duniya

ವಾಸ್ತವ್ಯ ಹೂಡಿದ್ದ ಮನೆ ಮಾಲೀಕರಿಗೆ ಗಿಫ್ಟ್ ನೀಡಿದ ಬಿ.ಎಸ್.ವೈ.

ಬೆಂಗಳೂರು: ರಾತ್ರಿ ಬೆಂಗಳೂರು ಗಾಂಧಿನಗರದ ಲಕ್ಷ್ಮಣಪುರಿ ಸ್ಲಂನಲ್ಲಿ ತಂಗಿದ್ದ ಬಿ.ಜೆ.ಪಿ. ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮನೆ ಮಾಲೀಕರಿಗೆ ಗಿಫ್ಟ್ ಕೊಟ್ಟಿದ್ದಾರೆ.

ತಾವು ತಂಗಿದ್ದ ಮನೆಯ ಮಾಲೀಕರಿಗೆ ಸೀರೆ, ಪಂಚೆ, ಶರ್ಟ್ ಬಟ್ಟೆ ಉಡುಗೊರೆಯಾಗಿ ಬಿ.ಎಸ್.ವೈ. ನೀಡಿದ್ದಾರೆ. ಅಲ್ಲದೇ, ಬಿ.ಎಸ್.ವೈ ತಂಗಿದ್ದ ಮನೆಗೆ ಹೊಸ ಲುಕ್ ನೀಡಲಾಗಿದೆ. ಟಾಯ್ಲೆಟ್ ಬದಲಿಸುವ ಜೊತೆಗೆ ಮಲಗಲು, ಕುಳಿತುಕೊಳ್ಳಲು ಹೊಸ ಕುರ್ಚಿಗಳನ್ನು ವ್ಯವಸ್ಥೆ ಮಾಡಲಾಗಿದೆ. ಯಡಿಯೂರಪ್ಪ ಮತ್ತು ನಾಯಕರು ಆಗಮಿಸಿದ್ದರಿಂದ ಮನೆ ಮಾಲೀಕರು ಅವರಿಗೆ ತಂಗಲು ಬೇಕಾದ ವ್ಯವಸ್ಥೆ ಮಾಡಿದ್ದಾರೆ.

ಲಕ್ಷ್ಮಣಪುರಿ ಸ್ಲಂನಲ್ಲಿ ರಾತ್ರಿ ವಾಸ್ತವ್ಯ ಹೂಡಿದ್ದ ಯಡಿಯೂರಪ್ಪ, ಬೆಳಿಗ್ಗೆ ಸ್ಲಂನ ವಿವಿಧೆಡೆ ತೆರಳಿ ನಿವಾಸಿಗಳೊಂದಿಗೆ ಸಮಾಲೋಚನೆ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ಧರಾಮಯ್ಯ ಎಂದಾದರೂ ಸ್ಲಂಗೆ ಹೋಗಿದ್ದಾರೆಯೇ? ಸ್ಲಂ ನಿವಾಸಿಗಳೊಂದಿಗೆ ಎಂದಾದ್ರೂ ತಿಂಡಿ ತಿಂದಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.

ನಾನು ಏನು ಮಾಡಬೇಕೆಂಬುದರ ಕುರಿತಾಗಿ ಸಿ.ಎಂ. ಸಿದ್ಧರಾಮಯ್ಯನವರ ಅಪ್ಪಣೆಯನ್ನು ಪಡೆಯಬೇಕಿಲ್ಲ. ಸ್ಲಂ ನಿವಾಸಿಗಳ ಸಮಸ್ಯೆಗೆ ಸ್ಪಂದಿಸಬೇಕೆಂಬ ಉದ್ದೇಶ ನಮ್ಮದು. ಸಮಯ ಬಂದಾಗ ಮತ್ತೆ ವಾಸ್ತವ್ಯ ಹೂಡುತ್ತೇವೆ. ಸಮಸ್ಯೆಗಳಿಗೆ ಪರಿಹಾರ ಹುಡುಕುತ್ತೇವೆ ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...