alex Certify
ಕನ್ನಡ ದುನಿಯಾ       Mobile App
       

Kannada Duniya

ಸಾಲಮನ್ನಾ: ರೈತರಿಗೆ ಶುಭ ಸುದ್ದಿ ನೀಡಿದ ರಾಜ್ಯ ಸರ್ಕಾರ

 ಸಾಲ ಮನ್ನಾದ ಸಲುವಾಗಿ ಸಹಕಾರ ಬ್ಯಾಂಕುಗಳು ಸಾಲ ಪಡೆದ ರೈತರಿಂದ ಬೇರೆ ಬೇರೆ ದಾಖಲೆ ಪತ್ರಗಳು ಕೇಳುತ್ತಿವೆ ಎಂಬ ಆರೋಪ ಎಲ್ಲೆಡೆ ಕೇಳಿ ಬರುತ್ತಿವೆ. ಇಷ್ಟೆಲ್ಲಾ ದಾಖಲೆ ಪತ್ರಗಳು ಬೇಡ ಕೇವಲ ಮೂರು ದಾಖಲಾತಿಗಳು ಇದ್ದರೆ ಸಾಕು ಎಂದು ಸರ್ಕಾರ ಸುತ್ತೋಲೆ ಹೊರಡಿಸಿದೆ.

ಸಾಲಮನ್ನಾಕ್ಕೆ ಸಂಬಂಧಿಸಿದಂತೆ ಬ್ಯಾಂಕಿನ ಅಧಿಕಾರಿಗಳು ರೈತರಿಂದ ವಿವಿಧ ದಾಖಲೆ ಪತ್ರಗಳನ್ನು ನೀಡುವಂತೆ ಕೇಳುತ್ತಿದ್ದಾರೆ ಇದರಿಂದ ರೈತರೂ ಸಂಕಟ ಪಡುವ ಸ್ಥಿತಿ ಉಂಟಾಗಿದೆ. ಹಾಗಾಗಿ ಸರ್ಕಾರ ಹೊಸದೊಂದು ನಿರ್ಧಾರ ಕೈಗೊಂಡಿದೆ. ಇದರಿಂದ ರೈತರು ಅನೇಕ ಬಗೆಯ ದಾಖಲೆಗಳ ಕಿರಿಕಿರಿ ಇಲ್ಲದೇ ಸಮಾಧಾನದ ಉಸಿರು ಬಿಡಬಹುದಾಗಿದೆ.

ಇನ್ನು ಸುತ್ತೋಲೆಯಲ್ಲಿ ಏನೇನಿದೆ ಗೊತ್ತಾ?

ಸಾಲ ಪಡೆದ ರೈತರಿಂದ ಸ್ವಯಂ ದೃಢೀಕರಣ ಪತ್ರ, ಹಾಗೂ ಇತ್ತೀಚಿನ ಭಾವಚಿತ್ರ, ಆಧಾರ್ ಕಾರ್ಡ್, ರೇಷನ್ ಕಾರ್ಡ್ ಹಾಗೂ ಲಭ್ಯವಿದ್ದಲ್ಲಿ ಪ್ಯಾನ್ ಕಾರ್ಡ್ ಜೆರಾಕ್ಸ್ ಪ್ರತಿ (ಒಂದು ಸೆಟ್) ಮಾತ್ರ ಪಡೆಯಬೇಕು. ಈ ಮೂರು ದಾಖಲೆಗಳನ್ನು ಹೊರತುಪಡಿಸಿ, ಬೇರೆ ಯಾವುದೇ ಪ್ರಮಾಣ ಪತ್ರಗಳನ್ನು ನೀಡುವಂತೆ ಬ್ಯಾಂಕಿನ ಅಧಿಕಾರಿಗಳು ರೈತರಿಗೆ ಒತ್ತಾಯಿಸುವಂತಿಲ್ಲ. ಹಾಗೇ ಸಾಲ ಪಡೆದ ರೈತರು ಮೃತಪಟ್ಟಿದ್ದರೆ ಅವರ ವಾರಸುದಾರರಿಂದ ಡೆತ್ ಸರ್ಟಿಫಿಕೆಟ್, ಸ್ವಯಂ ದೃಢೀಕರಣ ಪತ್ರವನ್ನು ಪಡೆಯಬೇಕು. ಹಾಗೇ ಇನ್ನು ಒಂದು ಮುಖ್ಯವಾದ ವಿಷಯವೆಂದರೆ ದೃಢೀಕರಣ ಪ್ರಮಾಣ ಪತ್ರ ಪಡೆಯಲು ನಿಗದಿಯಾಗಿದ್ದ ಗಡುವನ್ನು ಇದೇ ತಿಂಗಳು 31ರ ವರೆಗೆ ವಿಸ್ತರಿಸಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...