alex Certify
ಕನ್ನಡ ದುನಿಯಾ       Mobile App
       

Kannada Duniya

ವಿಚಾರಣೆಯಲ್ಲಿ ಬಯಲಾಯ್ತು ಸಲಿಂಗಕಾಮಿ ರಹಸ್ಯ

ಬೆಂಗಳೂರು: ನಾಲ್ವರು ದುಷ್ಕರ್ಮಿಗಳು ಅಪಹರಿಸಿ ಹಣ ದೋಚಿದ್ದಾಗಿ, ಉಪನ್ಯಾಸಕನೊಬ್ಬ ನೀಡಿದ್ದ ದೂರಿನ ತನಿಖೆ ಕೈಗೊಂಡಿದ್ದ ಪೊಲೀಸರಿಗೆ ಅಸಲಿ ವಿಷಯ ಗೊತ್ತಾಗಿದೆ.

ದೊಡ್ಡಬಳ್ಳಾಪುರ ಬಳಿಯ ಖಾಸಗಿ ಕಾಲೇಜೊಂದರಲ್ಲಿ ಉಪನ್ಯಾಸಕನಾಗಿರುವ ವ್ಯಕ್ತಿಯನ್ನು ಕಿಡ್ನಾಪ್ ಮಾಡಿ ಹಣ ದೋಚಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಆದಿಲ್, ಆಫೀಜ್, ನಾಸಿರ್ ಹಾಗೂ ಅಮಾನ್ ಬಂಧಿತರು. ಸಲಿಂಗಕಾಮಿಯಾಗಿದ್ದ ಉಪನ್ಯಾಸಕ ಆನ್ ಲೈನ್ ಮೂಲಕ ಈ ನಾಲ್ವರನ್ನು ಪರಿಚಯಿಸಿಕೊಂಡು ಮನೆಗೆ ಕರೆಸಿಕೊಂಡಿದ್ದಾನೆ.

ಅಕ್ಟೋಬರ್ 21 ರಂದು ಮನೆಯಿಂದ ಇವರೆಲ್ಲಾ ಉಪನ್ಯಾಸಕನ ಕಾರ್ ನಲ್ಲಿ ಸುತ್ತಾಡಲು ಹೋಗಿದ್ದು, ಉಪನ್ಯಾಸಕನ ಬಳಿ ಹಣ ಇರುವುದನ್ನು ತಿಳಿದ ನಾಲ್ವರು, ಹಲ್ಲೆ ನಡೆಸಿ, ಪೇಟಿಎಂ ಮೂಲಕ ಹಣ ಪಡೆದು ಪರಾರಿಯಾಗಿದ್ದಾರೆ. ಈ ವಿಷಯ ಮುಚ್ಚಿಟ್ಟಿದ್ದ ಉಪನ್ಯಾಸಕ, ತನ್ನನ್ನು ಅಪಹರಿಸಿ ಹಣ ದೋಚಲಾಗಿದೆ ಎಂದು ಮಹಾಲಕ್ಷ್ಮಿ ಲೇಔಟ್ ಪೊಲೀಸರಿಗೆ ದೂರು ನೀಡಿದ್ದಾನೆ.

ತನಿಖೆ ಕೈಗೊಂಡ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಅಸಲಿ ವಿಷಯ ಬೆಳಕಿಗೆ ಬಂದಿದೆ. ಈ ನಾಲ್ವರು, ಸಲಿಂಗಕಾಮಿಗಳನ್ನು ಗುರುತಿಸಿ ಅವರನ್ನು ಪರಿಚಯಿಸಿಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದರೆನ್ನಲಾಗಿದೆ. ಇವರನ್ನು ತಿಳಿಯದ ಸಲಿಂಗಕಾಮಿ ಉಪನ್ಯಾಸಕ ತಾನೇ ಅವರನ್ನು ಕರೆಸಿಕೊಂಡು ಯಾಮಾರಿದ್ದಾನೆ. ಆತನ ಅಸಲಿ ವಿಷಯವೂ ಪೊಲೀಸ್ ವಿಚಾರಣೆಯಲ್ಲಿ ಬಯಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...