alex Certify
ಕನ್ನಡ ದುನಿಯಾ       Mobile App
       

Kannada Duniya

ಗೌರಿ ಹತ್ಯೆಗೆ ವರ್ಷದ ಹಿಂದೆಯೇ ರೂಪಿಸಲಾಗಿತ್ತು ಪ್ಲಾನ್…!

ಹಿಂದೂ ಮೂಲಭೂತವಾದಿ ಸಂಸ್ಥೆಯ ನಾಲ್ವರು ಕಾರ್ಯಕರ್ತರಿಂದ ಗೌರಿ ಲಂಕೇಶ್ ಹತ್ಯೆ ನಡೆದಿದೆ ಎಂಬ ಅಂಶ ಈಗ ಬಹಿರಂಗವಾಗಿದೆ. ವಿಶೇಷ ತನಿಖಾ ತಂಡದ (ಎಸ್ಐಟಿ) ಪ್ರಕಾರ ಈ ಸಂಘಟನೆಯಲ್ಲಿ ಸನಾತನ ಸಂಸ್ಥೆ, ಹಿಂದೂ ಜನಜಾಗೃತಿ ಸಮಿತಿ ಮತ್ತು ಇತರೆ ಬಲಪಂಥೀಯ ಸಂಘಟನೆ ಸದಸ್ಯರಿದ್ದಾರೆಂದು ಹೇಳಲಾಗುತ್ತಿದೆ.

ಗೌರಿ ಲಂಕೇಶ್ ಹತ್ಯೆಯ ಮಾಸ್ಟರ್ ಮೈಂಡ್ ಎನಿಸಿಕೊಂಡಿರುವ ಅಮೋಲ್ ಕಾಳೆ ಈ ಹಿಂದೆ ಹಿಂದೂ ಜನಜಗೃತಿ ಸಮಿತಿ ಸಂಚಾಲಕನಾಗಿದ್ದ. ಮತ್ತೊಬ್ಬ ಆರೋಪಿ ಅಮಿತ್ ದೇಗ್ವೇಕರ್ ಸನಾತನ ಸಂಸ್ಥೆಯಲ್ಲಿ ಸಾಧಕನಾಗಿದ್ದನೆನ್ನಲಾಗಿದೆ.

ಈ ಸಂಘಟನೆಯ ಸದಸ್ಯರು ದೇಶಾದ್ಯಂತ ಹತ್ಯೆ ಮಾಡಬೇಕಾದ 26 ವ್ಯಕ್ತಿಗಳ ಹೆಸರನ್ನು ಪಟ್ಟಿ ಮಾಡಿಕೊಂಡಿದ್ದು, ಹತ್ಯೆ ಮಾಡುವ ತಂಡದಲ್ಲಿ 60 ಜನರಿದ್ದರು ಎನ್ನಲಾಗ್ತಿದೆ. ಇದೀಗ ಎಸ್ಐಟಿಯು ಹಿಟ್ ಲಿಸ್ಟ್ ನಲ್ಲಿದ್ದ 14 ಕ್ಕೂ‌ ಹೆಚ್ಚು ಹೆಸರನ್ನು ಮಹಾರಾಷ್ಟ್ರದ ಎಟಿಸ್ ಜತೆ ಹಂಚಿಕೊಂಡಿದೆ. ಕರ್ನಾಟಕ ಎಸ್ಐಟಿ ಮಾಹಿತಿ ಆಧಾರದ ಮೇಲೆ ಇತ್ತೀಚೆಗೆ ಮುಂಬೈನಲ್ಲಿ ಕೆಲವರನ್ನು ಬಂಧಿಸಲಾಗಿದೆ.

2017ರ ಸೆಪ್ಟೆಂಬರ್ 5ರಂದು ಗೌರಿ ಲಂಕೇಶ್ ಹತ್ಯೆಯಾಗಿದ್ದು, ಹತ್ಯೆಗೆ ಒಂದು ವರ್ಷದ ಮುಂಚೆಯ ಹತ್ಯೆಯ ಪ್ಲಾನ್ ಸಿದ್ಧವಾಗಿತ್ತು. ಆರೋಪಿ ಪರಶುರಾಮ ವಾಘ್ಮೋರೆಯನ್ನು ಒಂದು ವರ್ಷದ ಹಿಂದೆ ಅಮೋಲ್ ಕಾಳೆ ಈ ಕೆಲಸಕ್ಕೆ ನೇಮಕ ಮಾಡಿದ್ದ ಎಂದು ಎಸ್ಐಟಿ ಕಂಡುಕೊಂಡಿದೆ.

 

ತನಿಖಾಧಿಕಾರಿಗಳ ಪ್ರಕಾರ ಅಮೋಲ್ ಕಾಳೆ ಅತಿ ಸೂಕ್ಷ್ಮವಾಗಿ ಹತ್ಯೆಯ ಯೋಜನೆ ರೂಪಿಸಿ, ನಿರ್ವಹಿಸಿದ್ದ. ಈವರೆಗೆ ಪೊಲೀಸರು 12 ಮಂದಿಯನ್ನು ಬಂಧಿಸಿದ್ದಾರೆ.

1. ಕೆ.ಟಿ. ನವೀನ್ ಕುಮಾರ್- ಹತ್ಯೆಗಾಗಿ ಶಸ್ತ್ರಾಸ್ತ್ರ ಸಂಗ್ರಹಿಸಿ ಹಸ್ತಾಂತರ ಮಾಡಿದ್ದ.
2. ಸುಜಿತ್ ಕುಮಾರ್- ಕೊಲೆಗಾರನ ನೇಮಕ (ಪರಶುರಾಮ ವಾಘ್ಮೋರೆ ನೇಮಕ)
3. ಅಮೋಲ್ ಕಾಳೆ- ಹತ್ಯೆಯ ಮಾಸ್ಟರ್ ಮೈಂಡ್
4. ಅಮಿತ್ ದೇಗ್ವೇಕರ್- ಈ ತಂಡದ ಉಪ ಮುಖ್ಯಸ್ಥ
5. ಮನೋಹರ್ ಏದ್ವೆ- ಕೊಲೆ ಪಿತೂರಿ ಪಾಲುದಾರ
6. ಪರಶುರಾಮ್ ವಾಘ್ಮೋರೆ- ಆಪಾದಿತ ಶೂಟರ್
7. ರಾಜೇಶ್ ಬಂಗೇರ- ಶಸ್ತ್ರಾಸ್ತ್ರ ತರಬೇತುದಾರ
8. ಗಣೇಶ್ ಮಿಸ್ಕಿನ್- ಬೈಕ್ ಮೂಲಕ ಸಹಕಾರ
9. ಅಮಿತ್- ಹತ್ಯೆಗೆ ಬಳಸಲಾದ ಆಯುಧವನ್ನು ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ದಿದ್ದು
10. ಸುರೇಶ್- ಆಯುಧ ಮರೆಮಾಚಿದ ವ್ಯಕ್ತಿ
11. ಭರತ್ ಕುರ್ಣೆ- ವಾಘ್ಮೋರೆಗೆ ಗನ್ ತರಬೇತಿಗೆ ಅವಕಾಶ ನೀಡಿದ ಭೂಮಿ ಮಾಲಿಕ
12. ಮೋಹನ್ ನಾಯ್ಕ್- ಕೊಲೆ ನಂತರ ಆಯುಧವನ್ನು ಇಟ್ಟುಕೊಳ್ಳಲು ಮನೆಯಲ್ಲಿ ಅವಕಾಶ ನೀಡಿದಾತ

ಕೆಲವು ತಿಂಗಳ ಹಿಂದೆ ಅಮೋಲ್ ಕಾಳೆಯನ್ನು ಬಂಧಿಸಿದ ಬಳಿಕ ಆತನ ಡೈರಿ ಪೊಲೀಸರಿಗೆ ಸಿಕ್ಕಿದೆ. ಅದರಲ್ಲಿನ ಕೋಡ್ ವರ್ಡ್ ಗಳನ್ನು ಡಿಕೋಡ್ ಮಾಡಿ ಕೆಲವು ಹೆಸರನ್ನು ಹೆಕ್ಕಿ ತೆಗೆದಿದ್ದಾರೆ. ಅದರಲ್ಲಿ ಕೊಲೆಯ ಭಾಗಿದಾರರ ಹೆಸರು, ಸಂಪರ್ಕ ಸಂಖ್ಯೆಗಳು ಇದ್ದವೆನ್ನಲಾಗಿದೆ.

ಡೈರಿಯ ಬಗ್ಗೆ ಆಳಕ್ಕಿಳಿದು ತನಿಖೆ ನಡೆಸಿದ ಪೊಲೀಸರಿಗೆ ಅಚ್ಚರಿಯ ಮಾಹಿತಿ ಸಿಕ್ಕಿದೆ. ಗೋವಿಂದ್ ಪನ್ಸಾರೆ, ನರೇಂದ್ರ ದಾಬೋಲ್ಕರ್, ಎಂ.ಎಂ.ಕಲಬುರಗಿ ಹತ್ಯೆಗೂ ಅಮೋಲ್ ಕಾಳೆಯೇ ಭಾಗಿದಾರ ಎಂಬುದು ಅರಿವಿಗೆ ಬಂದಿದೆ.

ಕಲಬುರಗಿ ಹತ್ಯೆವರೆಗೂ ಆ ಸಂಘಟನೆಯ ನೇತೃತ್ವವನ್ನು ಡಾ.ವೀರೇಂದ್ರ ತಾವ್ಡೆ ವಹಿಸಿಕೊಂಡಿದ್ದರು. ಅವರ ಬಂಧನದ ಬಳಿಕ ಅಮೋಲ್ ಕಾಳೆ ಆ ತಂಡದ ನೇತೃತ್ವ ತೆಗೆದುಕೊಂಡಿದ್ದಾನೆ. ಈ ಡೈರಿಯ ಮಾಹಿತಿಯನ್ನು ಮಹಾರಾಷ್ಟ್ರ ತನಿಖಾ ತಂಡದ ಜತೆಗೆ ಹಂಚಿಕೊಂಡಿದ್ದು, ಇದರ ಆಧಾರದಲ್ಲಿ ಬಲಪಂಥೀಯ ಸಂಘಟನೆಯ ಸದಸ್ಯರ ಮೇಲೆ ಕಣ್ಗಾವಲಿನಲ್ಲಿಡಲಾಗಿತ್ತು. ಅದರ ಪರಿಣಾಮ ಇತ್ತೀಚೆಗೆ ಕೆಲವರ ಬಂಧನವಾಗಿದೆ ಎನ್ನಲಾಗಿದೆ.

ಎಸ್ಐಟಿ ಪ್ರಕಾರ ಕೊಲೆಗೆ ಎರಡು ಗನ್ ಬಳಕೆಯಾಗಿದೆ. ಪನ್ಸಾರೆ ಹತ್ಯೆಗೆ ಎರಡು ಗನ್ ಬಳಕೆಯಾಗಿದ್ದರೆ, ಗೌರಿ, ಕಲಬುರಗಿ, ದಾಬೋಲ್ಕರ್ ಹತ್ಯೆಗೆ ಒಂದು ಗನ್ ಮಾತ್ರ ಬಳಕೆಯಾಗಿದೆ. ಮುಂಬೈ ಎಟಿಎಸ್ ಗನ್ಗಳನ್ನು ವಶಪಡಿಸಿಕೊಂಡಿದ್ದು, ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...