alex Certify
ಕನ್ನಡ ದುನಿಯಾ       Mobile App
       

Kannada Duniya

ಗೌರಿ ಲಂಕೇಶ್ ಹತ್ಯೆ ಕೃತ್ಯಕ್ಕೆ ಬಳಸಿದ್ದ ಬೈಕ್ ಪತ್ತೆ

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಎಸ್.ಐ.ಟಿ, ಗೌರಿ ಹತ್ಯೆಗೆ ಹಂತಕರು ಬಳಸಿದ್ದ ಬೈಕ್ ನ್ನು ಮಹಾರಾಷ್ಟ್ರದಲ್ಲಿ ಪತ್ತೆ ಹಚ್ಚಿದ್ದಾರೆ.

ಮಹಾರಾಷ್ಟ್ರದ ಉಗ್ರ ನಿಗ್ರಹ ದಳ (ಎಟಿಎಸ್) ನೀಡಿದ ಮಾಹಿತಿ ಮೇರೆಗೆ ಎಸ್.ಐ.ಟಿ. ಅಧಿಕಾರಿಗಳು, ಮಹಾರಾಷ್ಟ್ರದ ನಾಂದೇಡ್ ಎಂಬಲ್ಲಿ ಗೌರಿ ಹತ್ಯೆಗೆ ಬಳಸಲಾಗಿದ್ದ ಬೈಕ್ ನ್ನು ಪತ್ತೆ ಮಾಡಿದ್ದಾರೆ.

ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣ ಪ್ರಕರಣಕ್ಕೆ ಸಂಬಂಧಿಸಿ ಎಟಿಎಸ್ ವಶದಲ್ಲಿರುವ ಶರತ್ ಕಸಲ್ಕರ್ ನಿಂದ ಅಧಿಕಾರಿಗಳು ಕಪ್ಪು ಬಣ್ಣದ ಫ್ಯಾಷನ್ ಬೈಕ್ ನ್ನು ವಶಕ್ಕೆ ಪಡೆದುಕೊಂಡಿದ್ದರು. ಇದೇ ಫ್ಯಾಷನ್ ಬೈಕ್ ನ್ನು ಶೂಟರ್ ಪರಶುರಾಮ್ ವಾಗ್ಮೋರೆ ಮತ್ತು ಗಣೇಶ್ ಮಿಸ್ಕಿನ್, ಗೌರಿ ಲಂಕೇಶ್ ಹತ್ಯೆ ಕೃತ್ಯಕ್ಕೂ ಬಳಸಿದ್ದಾರೆ ಎಂದು ಎಸ್ಐಟಿ ತಿಳಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...