alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಹೊರಬಿತ್ತು ‘ಶಾಕಿಂಗ್’ ಸಂಗತಿ

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ತನಿಖೆ ಮುಂದುವರೆದ ಹಾಗೆಲ್ಲಾ ಶಾಕಿಂಗ್ ವಿಚಾರಗಳು ಬೆಳಕಿಗೆ ಬರ್ತಿವೆ. ಪೊಲೀಸರು ಬಂಧಿಸಿದಂತಾ ಅನ್ಮೋಲ್ ಕಾಳೆ ಮತ್ತು ಸುಜಿತ್ ಕುಮಾರ್ ವಿಶೇಷ ತನಿಖಾ ತಂಡದ ಎದುರು ಹಲವು ಆತಂಕಕಾರಿ ಸಂಗತಿಗಳನ್ನ ಬಾಯ್ಬಿಟ್ಟಿದ್ದಾರೆ. ಕಾಳೆ ಬಳಿ ಇದ್ದ ಬ್ಯಾಗ್ ನಲ್ಲಿ ಪೊಲೀಸರಿಗೆ 20 ಮೊಬೈಲ್ ಫೋನ್ ಗಳು ಮತ್ತು ಉಡುಪಿಯ ಸುಜಿತ್ ಮನೆಯ ಕೆಲಸಗಾರರ ಬಳಿ 22 ಮೊಬೈಲ್ ಫೋನ್ ಗಳು ಪತ್ತೆಯಾಗಿವೆ.

ಅನ್ಮೋಲ್ ಕಾಳೆ ಮತ್ತು ಸುಜಿತ್ ರಿಂದ ವಶಪಡಿಸಿಕೊಳ್ಳಲಾದ 42 ಫೋನ್ ಗಳು ಹಿಂದೂಪರ ಸಂಘಟನೆಗಳ ಸದಸ್ಯರ ಪ್ರತ್ಯೇಕ ಸಂಪರ್ಕಕ್ಕಾಗಿ ಬಳಸಲಾಗಿರುವ ಫೋನ್ ಗಳಾಗಿರುವ ಸಾಧ್ಯತೆ ಇದೆ ಅಂತ ತನಿಖಾ ತಂಡ ಅಭಿಪ್ರಾಯ ವ್ಯಕ್ತಪಡಿಸಿದೆ. ಒಂದು ಫೋನ್ ನಿಂದ ಮತ್ತೊಂದು ಫೋನ್ ಗೆ ನಿರ್ದಿಷ್ಟವಾಗಿ ಒಬ್ಬನೇ ವ್ಯಕ್ತಿ ಕರೆ ಮಾಡುವ ತಂತ್ರ ಇದರ ಹಿಂದೆ ಇದೆ ಅಂತಿದ್ದಾರೆ ಪೊಲೀಸರು.

ವಿಚಾರಣೆ ಮುಂದುವರೆಸಿರುವ ಪೊಲೀಸರು ಹಲವು ಶಾಕಿಂಗ್ ಸಂಗತಿಗಳನ್ನ ಹೊರಗೆಳೆದಿದ್ದಾರೆ. ಬಂಧಿತ ಆರೋಪಿ ಅನ್ಮೋಲ್ ಕಾಳೆ ಮಹಾರಾಷ್ಟ್ರದ ಸನಾತನ ಸಂಸ್ಥೆಯ ಅಂಗ ಸಂಸ್ಥೆಯಾದಂತಾ ಪುಣೆಯ ಹಿಂದೂ ಜನಜಾಗೃತಿ ಸಮಿತಿಯ ಮಾಜಿ ಕಾರ್ಯನಿರ್ವಾಹಕನಾಗಿದ್ದ. ಸುಜಿತ್ ಕರ್ನಾಟಕದಲ್ಲಿನ ಹಿಂದೂ ಜನ ಜಾಗೃತಿ ಸಮಿತಿಯ ಮಾಜಿ ಸದಸ್ಯನಾಗಿದ್ದ. ಸಂಘಟನೆಗೆ ಯುವಕರನ್ನು ನೇಮಿಸಿಕೊಳ್ಳೋದೇ ಸುಜಿತ್ ಕೆಲಸವಾಗಿತ್ತಂತೆ.

ಸಂಘಟನೆಗೆ ಸೇರಿಸಿಕೊಂಡ ಯುವಕರಿಗೆ ರಹಸ್ಯವನ್ನು ಕಾಯ್ದುಕೊಳ್ಳುವ ಬಗ್ಗೆ ತುಂಬಾನೇ ಎಚ್ಚರಿಕೆ ನೀಡಲಾಗ್ತಿತ್ತಂತೆ. ಸಂಘಟನೆಗೆ ಹೊಸದಾಗಿ ಸೇರಿದ ಯುವಕರಿಗೆ ಮೊಬೈಲ್ ನಂಬರ್ ಕೊಡದೆ ಕೇವಲ ಮುಖತಃ ಭೇಟಿಯಾಗುವಂತೆ ಹೇಳಲಾಗ್ತಿತ್ತಂತೆ. ಯುವಕರು ಸಂಘಟನೆಗೆ ಸರಿ ಹೊಂದುತ್ತಾರೆ ಅನ್ನಿಸಿದ ನಂತರವಷ್ಟೇ ಅವರಿಗೆ ಮೊಬೈಲ್ ಫೋನ್ ಕೊಟ್ಟು ಪ್ರತ್ಯೇಕ ಕೋಡ್ ನಂಬರ್ ನೀಡುತ್ತಿದ್ದರಂತೆ. ಅರೋಪಿಗಳಿಂದ ಇನ್ನೂ ಹೆಚ್ಚಿನ ವಿಚಾರವನ್ನು ಹೊರಗೆಳೆಯುವ ನಿಟ್ಟಿನಲ್ಲಿ ಪೊಲಿಸರು ತನಿಖೆ ಮುಂದುವರೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...