alex Certify
ಕನ್ನಡ ದುನಿಯಾ       Mobile App
       

Kannada Duniya

ಮೊಳಗಿದ ‘ಗೌರಿ ಲಂಕೇಶ್ ಅಮರ್ ರಹೇ..’ ಘೋಷಣೆ

ಬೆಂಗಳೂರು: ನಿನ್ನೆ ರಾತ್ರಿ ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ಚಿಂತಕಿ, ಪತ್ರಕರ್ತೆ ಗೌರಿ ಲಂಕೇಶ್ ಅವರ ಅಂತ್ಯಕ್ರಿಯೆ ಚಾಮರಾಜಪೇಟೆಯ ಟಿ.ಆರ್. ಮಿಲ್ ಬಳಿಯ ರುದ್ರಭೂಮಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.

ಗೌರಿ ಲಂಕೇಶ್ ಅವರ ಇಚ್ಛೆಯಂತೆ ನೇತ್ರಗಳನ್ನು ದಾನ ಮಾಡಲಾಗಿತ್ತು. ಸಾರ್ವಜನಿಕರ ಅಂತಿಮ ದರ್ಶನದ ಬಳಿಕ ಸಂಜೆ ನೆರೆದಿದ್ದ ಅಪಾರ ಜನರ ಸಮ್ಮುಖದಲ್ಲಿ ಅಂತ್ಯಕ್ರಿಯೆ ನೆರವೇರಿದೆ.

ಅವರ ಸಹೋದರ ಇಂದ್ರಜಿತ್ ಲಂಕೇಶ್ ಅಂತಿಮ ಸಂಸ್ಕಾರ ನೆರವೇರಿಸಿದ್ದಾರೆ. ಯಾವುದೇ ಧಾರ್ಮಿಕ ವಿಧಿ ವಿಧಾನ ಅನುಸರಿಸದೇ ಅಂತ್ಯಕ್ರಿಯೆ ನಡೆದಿದ್ದು, ನಾಡಿನ ವಿವಿಧ ಕಡೆಗಳಿಂದ ಆಗಮಿಸಿದ್ದವರು ‘ಗೌರಿ ಲಂಕೇಶ್ ಅಮರ್ ರಹೇ..’ ಘೋಷಣೆ ಕೂಗಿದ್ದಾರೆ.

ಅಲ್ಲಿದ್ದವರ ಕಣ್ಣಾಲಿಗಳೆಲ್ಲಾ ಒದ್ದೆಯಾಗಿದ್ದವು. ಕೂಡಲೇ ಗೌರಿ ಲಂಕೇಶ್ ಅವರನ್ನು ಹತ್ಯೆಗೈದ ಹಂತಕರನ್ನು ಬಂಧಿಸಬೇಕೆಂಬುದು ಅಲ್ಲಿದ್ದ ಎಲ್ಲರ ಬೇಡಿಕೆಯಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...