alex Certify
ಕನ್ನಡ ದುನಿಯಾ       Mobile App
       

Kannada Duniya

ಗ್ಯಾಸ್ ಟ್ಯಾಂಕರ್ ಪಲ್ಟಿ; ತಪ್ಪಿದ ಅನಾಹುತ

ಮೈಸೂರು: ದಟ್ಟಗಳ್ಳಿ ರಿಂಗ್ ರಸ್ತೆಯ ಸಾರಾ ಕನ್ವೆನ್ಷನ್ ಹಾಲ್ ಬಳಿ 18 ಟನ್ ಗ್ಯಾಸ್ ತುಂಬಲಾಗಿದ್ದ ಟ್ಯಾಂಕರ್ ವೊಂದು ಪಲ್ಟಿಯಾಗಿದೆ. ಚಾಲಕ ಅತೀ ವೇಗದಿಂದ ಗಾಡಿ ಚಲಾಯಿಸಿದ್ದೇ ಈ ಘಟನೆಗೆ ಕಾರಣವಾಗಿದೆ.

ಚಾಲಕ ಅತೀ ವೇಗದಿಂದ ಟ್ಯಾಂಕರ್ ಚಲಾಯಿಸಿದ್ದರಿಂದ ನಿಯಂತ್ರಣ ತಪ್ಪಿ ಈ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿದ್ದು, ಇಷ್ಟೆಲ್ಲಾ ಆದರೂ ಅದೃಷ್ಟವಶಾತ್ ಗ್ಯಾಸ್ ಮಾತ್ರ ಸೋರಿಕೆಯಾಗಿಲ್ಲ. ಗ್ಯಾಸ್ ಸೋರಿಕೆಯಾಗಿದ್ದರೆ ದೊಡ್ಡದೊಂದು ಅನಾಹುತವೇ ನಡೆಯುತ್ತಿತ್ತು.

ಘಟನಾ ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಬಂದು ಪರಿಶೀಲನೆ ನಡೆಸಿದ್ದಾರೆ. ಜತೆಗೆ ಟ್ಯಾಂಕರ್ ನ ತೆರವು ಕಾರ್ಯವನ್ನೂ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...