alex Certify
ಕನ್ನಡ ದುನಿಯಾ       Mobile App
       

Kannada Duniya

4.49 ಕೋಟಿ ರೂ. ಮೌಲ್ಯದ ಸಿಗರೇಟ್ ಕದ್ದ ಖದೀಮರು

cigarette4.49 ಕೋಟಿ ರೂ. ಮೌಲ್ಯದ 13 ಟನ್ ಸಿಗರೇಟ್ ಸಾಗಿಸುತ್ತಿದ್ದ ಟ್ರಕ್ ನ್ನು ನಾಲ್ವರು ಖದೀಮರ ತಂಡ ಅಪಹರಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಮೇ 26 ರ ಬೆಳಗಿನ ಜಾವ 4-20 ರ ಸುಮಾರಿಗೆ ಔಟರ್ ರಿಂಗ್ ರೋಡ್ ನ ನಾಗರಬಾವಿ ಜಂಕ್ಷನ್ ಬಳಿ ಟ್ರಕ್ ಅಡ್ಡಗಟ್ಟಿದ ದುಷ್ಕರ್ಮಿಗಳು, ಚಾಲಕನಿಗೆ ಚಾಕು ತೋರಿಸಿ ಬೆದರಿಕೆ ಹಾಕಿ ತಮ್ಮ ಕಾರಿನಲ್ಲಿ ಕೂರಿಸಿಕೊಂಡಿದ್ದಾರೆ. ದುಷ್ಕರ್ಮಿಗಳ ಪೈಕಿ ಒಬ್ಬಾತ ಟ್ರಕ್ ಚಲಾಯಿಸಿಕೊಂಡು ಹೋಗಿದ್ದು, ಶ್ರೀರಂಗಪಟ್ಟಣದ ಬಳಿ ಚಾಲಕನ ಕೈ, ಕಾಲು ಕಟ್ಟಿ ಹೊರ ಹಾಕಿದ ಖದೀಮರು, ಟ್ರಕ್ ಸಮೇತ ಪರಾರಿಯಾಗಿದ್ದಾರೆ.

ತನಗೆ ಕಟ್ಟಿದ್ದ ಹಗ್ಗ ಬಿಡಿಸಿಕೊಂಡ ಚಾಲಕ ನಗರಕ್ಕೆ ಬಂದು ಸೋಮವಾರದಂದು ಪೊಲೀಸರಿಗೆ ದೂರು ನೀಡಿದ್ದಾನೆ. ಟ್ರಕ್ ಕೇರಳಕ್ಕೆ ಹೋಗುತ್ತಿತ್ತೆಂದು ಹೇಳಲಾಗಿದ್ದು, ಟ್ರಕ್ ಚಾಲಕ ರಾಧಾಕೃಷ್ಣ ನೀಡಿರುವ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಚಂದ್ರಾ ಲೇ ಔಟ್ ಠಾಣೆ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...