alex Certify
ಕನ್ನಡ ದುನಿಯಾ       Mobile App
       

Kannada Duniya

ಗಣಪತಿ ವಿಸರ್ಜನೆ ಮಾಡಲೋದ 10 ಕ್ಕೂ ಅಧಿಕ ಮಂದಿ ನೀರು ಪಾಲು

drowningಗಣಪತಿ ವಿಸರ್ಜಿಸಲು ತೆಪ್ಪದಲ್ಲಿ ಹೋಗುತ್ತಿದ್ದ ವೇಳೆ ಅದು ಮುಳುಗಿದ ಪರಿಣಾಮ ಹತ್ತಕ್ಕೂ ಅಧಿಕ ಮಂದಿ ನೀರು ಪಾಲಾಗಿರುವ ಘಟನೆ ಶಿವಮೊಗ್ಗ ತಾಲೂಕಿನ ಹಾಡೋನಹಳ್ಳಿಯಲ್ಲಿ ನಡೆದಿದೆ.

ಇಂದು ಮಧ್ಯಾಹ್ನ 2-30 ರ ಸುಮಾರಿಗೆ ಗಣಪತಿಯನ್ನು ತೆಪ್ಪದಲ್ಲಿ ತೆಗೆದುಕೊಂಡು ತುಂಗಾಭದ್ರಾ ನದಿ ಮಧ್ಯದಲ್ಲಿ ವಿಸರ್ಜನೆ ಮಾಡಲು ಸುಮಾರು 20 ಮಂದಿ ತೆರಳಿದ್ದರೆನ್ನಲಾಗಿದೆ. ತೆಪ್ಪ ಮುಳುಗಿದ ಪರಿಣಾಮ ಹತ್ತಕ್ಕೂ ಅಧಿಕ ಮಂದಿ ನೀರು ಪಾಲಾಗಿದ್ದರೆಂದು ಹೇಳಲಾಗುತ್ತಿದ್ದು, ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಕಾಣೆಯಾದವರಿಗಾಗಿ ಶೋಧ ಕಾರ್ಯ ಕೈಗೊಂಡಿದ್ದಾರೆ. ಸ್ಥಳದಲ್ಲಿ ಕಾಣೆಯಾದವರ ಸಂಬಂಧಿಕರು ನೆರೆದಿದ್ದು, ನೀರಿನಲ್ಲಿ ಮುಳುಗಿರುವ ತಮ್ಮವರ ಸ್ಥಿತಿ ಏನಾಗಿದೆಯೋ ಎಂಬ ಆತಂಕದಲ್ಲಿದ್ದಾರೆ. ಈ ಮಧ್ಯೆ ಮಂಜು ಎಂಬಾತನ ಶವ ಪತ್ತೆಯಾಗಿದ್ದು, ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...