alex Certify
ಕನ್ನಡ ದುನಿಯಾ       Mobile App
       

Kannada Duniya

ಮಳೆ ಬರ್ಲಿಲ್ಲ ಅಂತ ಸಿಟ್ಟಿಗೆದ್ದ ರೈತ ಮಾಡಿದ್ದೇನು..?

ಸಕಾಲಕ್ಕೆ ಮಳೆ ಬಾರದಿದ್ದ ಕಾರಣ ರೈತರು ಬೆಳೆದ ಬೆಳೆ ಒಣಗಿದೆ. ಈಗ ಹಲವೆಡೆ ಆಕಾಲಿಕ ಮಳೆಯಾಗುತ್ತಿದ್ದರೂ ತಾವು ಬೆಳೆದ ಬೆಳೆಗೆ ಇದರಿಂದ ಅನುಕೂಲವಾಗಲಿಲ್ಲವೆಂಬ ನಿರಾಸೆಯೂ ರೈತರನ್ನು ಕಾಡುತ್ತಿದೆ. ಕೆಲವೆಡೆಯಂತೂ ಮಳೆ ದರ್ಶನವೇ ಆಗಿಲ್ಲ. ಹೀಗೆ ಮಳೆಯಾಗದ ಕಾರಣ ಸಿಟ್ಟಿಗೆದ್ದ ರೈತರೊಬ್ಬರು ಏನು ಮಾಡಿದ್ದಾರೆ ಗೊತ್ತಾ..? ಮುಂದೆ ಓದಿ.

ಬೆಳಗಾವಿ ಜಿಲ್ಲೆ ರಾಯಭಾಗ ತಾಲೂಕಿನ ನಸಲಾಪೂರ ಗ್ರಾಮದ ಶಿವಗೌಡ ಪಾಟೀಲ್ ದೈವ ಭಕ್ತರಾಗಿದ್ದು, ಈ ಬಾರಿ ಗಣೇಶನನ್ನು ತಮ್ಮ ಮನೆಯಲ್ಲಿ ಪ್ರತಿಷ್ಟಾಪಿಸಿದ್ದರು. ಮಳೆ ಇಲ್ಲದೆ ಕಂಗಾಲಾಗಿದ್ದರೂ ದೇವರು ತಮ್ಮಡೆಗೆ ಕೃಪಾದೃಷ್ಟಿ ಬೀರದಿರುವುದರಿಂದ ಸಿಟ್ಟಿಗೆದ್ದ ಶಿವಗೌಡ ಪಾಟೀಲ, ನೀರಿಲ್ಲದ ಕಷ್ಟ ಗಣಪನಿಗೂ ತಿಳಿಯಲಿ ಎಂದು ಗಣಪನನ್ನು ನೀರಿನಲ್ಲಿ ವಿಸರ್ಜಿಸದೆ ತಮ್ಮ ಹೊಲದಲ್ಲಿ ಸಮಾಧಿ ಮಾಡಿದ್ದಾರೆ.

ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿರುವ ಶಿವಗೌಡ ಪಾಟೀಲ, ನಾನು ನಂಬಿರುವ ದೇವರೇ ನಮ್ಮನ್ನು ಕೈ ಹಿಡಿಯಲಿಲ್ಲ. ಮಳೆ ಇಲ್ಲದ ಕಾರಣ ಬೆಳೆ ಕೈಗೆಟುಗದಂತಾಗಿದೆ. ಇದರಿಂದಾಗಿ ಜೀವನವೇ ಕಷ್ಟಕರವಾಗಿದೆ ಎಂದು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...