alex Certify
ಕನ್ನಡ ದುನಿಯಾ       Mobile App
       

Kannada Duniya

ಗಣಪತಿ ಸ್ವಾಗತಕ್ಕೆ ಯುವಕರ ಸಕಲ ಸಿದ್ಧತೆ

ಗೌರಿ ಹಬ್ಬ ಹೆಣ್ಣುಮಕ್ಕಳ ಹಬ್ಬವಾದರೆ, ಮರುದಿನ ಬರುವ ಗಣಪತಿ ಹಬ್ಬ ಯುವಕರ ಹಬ್ಬವಾಗಿದೆ. ಯುವಕರು ಒಟ್ಟಾಗಿ ಸೇರಿ ತಮ್ಮ, ತಮ್ಮ ಏರಿಯಾಗಳಲ್ಲಿ ಗಣಪತಿ ಪ್ರತಿಷ್ಠಾಪಿಸಿ, ಕೆಲದಿನಗಳ ಕಾಲ ಪೂಜಿಸಿ ಬಳಿಕ ವಿಸರ್ಜಿಸುತ್ತಾರೆ. ಇದಕ್ಕಾಗಿ ಅನೇಕ ದಿನಗಳ ತಯಾರಿ ನಡೆದಿರುತ್ತದೆ.

10 -15 ದಿನಗಳ ಮೊದಲೇ ಪೆಂಡಾಲ್ ಗಳನ್ನು ನಿರ್ಮಿಸಿ, ಗಣಪತಿ ಪ್ರತಿಷ್ಠಾಪಿಸಲು ಮಂಟಪಗಳನ್ನು ಸಿದ್ಧಡಿಸಲಾಗುತ್ತದೆ. ಅಲ್ಲದೇ ತಮಗೆ ಬೇಕಾದಂತಹ ಗಣಪತಿ ಮೂರ್ತಿಯ ನಿರ್ಮಾಣಕ್ಕೆ ಕಲಾವಿದರಿಗೆ ಮೊದಲೇ ಮುಂಗಡ ಪಾವತಿಸಲಾಗುತ್ತದೆ.

ಯುವಕರೆಲ್ಲಾ ಸೇರಿ ಸಂಭ್ರಮದಿಂದ ಗಣಪತಿ ಹಬ್ಬಕ್ಕೆ ತಯಾರಿ ಮಾಡಿಕೊಳ್ಳುತ್ತಾರೆ. ಇತ್ತೀಚೆಗೆ ಟ್ರೆಂಡ್ ಗೆ ತಕ್ಕಂತೆ ಗಣಪತಿ ಮೂರ್ತಿಗಳನ್ನು ತಯಾರಿಸಲಾಗುತ್ತದೆ.

ಬಾಹುಬಲಿ ಗಣಪ, ಯೋಧ ಗಣಪ, ಮಂಗಳಯಾನ ಗಣಪ, ಚಾಯ್ ಪೇ ಚರ್ಚಾ ಗಣಪ, ಹೀಗೆ ಹಲವಾರು ರೀತಿಯ ಗಣಪತಿಗಳನ್ನು ಕಳೆದ ವರ್ಷಗಳಲ್ಲಿ ಪ್ರತಿಷ್ಠಾಪಿಸಲಾಗಿತ್ತು.

ಈ ವರ್ಷವೂ ಮಾರುಕಟ್ಟೆಗೆ ವಿವಿಧ ಭಂಗಿಗಳ ವಿಶೇಷವಾದ ಗಣಪತಿಗಳು ಬಂದಿವೆ. ಮನೆಗಳಲ್ಲಿ, ಏರಿಯಾಗಳಲ್ಲಿ ಗಣಪತಿ ಪ್ರತಿಷ್ಠಾಪಿಸಲು ಜನ ಈಗಾಗಲೇ ಸಿದ್ಧತೆಯನ್ನು ಮಾಡಿಕೊಂಡಿದ್ದಾರೆ. ಆಕರ್ಷಕ ಗಣಪತಿ ಮಂಟಪಗಳು ಗಮನ ಸೆಳೆಯುವಂತಿವೆ. ಕೆಲವು ದಿನಗಳ ಕಾಲ ಹಬ್ಬದ ಸಂಭ್ರಮ ಹೇಳತೀರದಾಗಿರುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...