alex Certify
ಕನ್ನಡ ದುನಿಯಾ       Mobile App
       

Kannada Duniya

ಸದನದಲ್ಲಿ ನಡೀತು ಅಹೋರಾತ್ರಿ ಧರಣಿ

vidhan s

ಬೆಂಗಳೂರು: ಡಿ.ವೈ.ಎಸ್.ಪಿ. ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸಿ.ಬಿ.ಐ. ತನಿಖೆಗೆ ವಹಿಸಬೇಕು. ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಪ್ರತಿಪಕ್ಷಗಳು ಸದನದಲ್ಲಿ ಅಹೋರಾತ್ರಿ ಧರಣಿ ನಡೆಸುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಿವೆ.

ವಿಧಾನಸಭೆ ಮತ್ತು ವಿಧಾನಪರಿಷತ್ ನಲ್ಲಿ ಬಿ.ಜೆ.ಪಿ. ಮತ್ತು ಜೆ.ಡಿ.ಎಸ್. ಶಾಸಕರು ಹೋರಾಟ ನಡೆಸಿ, ಸರ್ಕಾರ ನ್ಯಾಂಯಾಂಗ ತನಿಖೆಗೆ ಪ್ರಕರಣವನ್ನು ವಹಿಸಿ 6 ತಿಂಗಳ ಒಳಗೆ ವರದಿ ಪಡೆಯಲಾಗುವುದೆಂದು ಹೇಳುವ ಮೂಲಕ ಪ್ರಕರಣವನ್ನು ಮುಚ್ಚಿಹಾಕುವ ಯತ್ನ ನಡೆಸಿದೆ ಎಂದು ಆರೋಪಿಸಿದ್ದಾರೆ. ರಾತ್ರಿ ಮಲಗುವ ಮೊದಲು ಕೆಲವು ಶಾಸಕರು ಸಿನಿಮಾ ಗೀತೆಗಳನ್ನು ಹಾಡಿದರು. ಮತ್ತೆ ಕೆಲವರು ಭಕ್ತಿಗೀತೆ, ಏಕಪಾತ್ರಾಭಿನಯದ ಡೈಲಾಗ್ ಹೇಳಿ ರಂಜಿಸಿದ್ದಾರೆ.

ಶಾಸಕರು ಸದನದಲ್ಲಿಯೇ ನಿದ್ದೆ ಮಾಡಿ, ಬೆಳಿಗ್ಗೆಯೇ ಎದ್ದು ವಾಕಿಂಗ್ ಮಾಡಿದರು. ಇಂದೂ ಕೂಡ ಹೋರಾಟ ಮುಂದುವರೆಯಲಿದೆ. ಸಚಿವ ಜಾರ್ಜ್ ರಾಜೀನಾಮೆ ನೀಡಬೇಕು, ಪ್ರಕರಣವನ್ನು ಸಿ.ಬಿ.ಐ.ಗೆ ವಹಿಸಬೇಕೆಂದು ಪ್ರತಿಪಕ್ಷಗಳು ಆಗ್ರಹಿಸಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...