alex Certify
ಕನ್ನಡ ದುನಿಯಾ       Mobile App
       

Kannada Duniya

ಕಣ್ಣೆದುರಲ್ಲೇ ನಡೆದ ಕೃತ್ಯದಿಂದ ಬೆಚ್ಚಿಬಿದ್ದ ಜನ

murder-gadag

ಗದಗ: ಹಾಡಹಗಲೇ ಯುವಕನೊಬ್ಬನನ್ನು ಹತ್ಯೆ ಮಾಡಿದ ಘಟನೆ ಗದಗ ಜಿಲ್ಲೆಯ ಬೆಟಗೇರಿಯಲ್ಲಿ ನಡೆದಿದೆ.

ವಿಜಯ ಮಹಾಂತೇಶ ಹಿರೇಮಠ(24) ಕೊಲೆಯಾದ ಯುವಕ. ಬೆಟಗೇರಿ ಐ.ಟಿ.ಐ. ಕಾಲೇಜ್ ಸಮೀಪ ಬೈಕ್ ನಲ್ಲಿ ಬರುತ್ತಿದ್ದ ವಿಜಯ್ ನನ್ನು ಹಿಂಬಾಲಿಸಿ ಬಂದ ನಾಲ್ವರು ದುಷ್ಕರ್ಮಿಗಳು, ಚಾಕುವಿನಿಂದ ಇರಿದಿದ್ದಾರೆ.

ಆತ ಬೈಕ್ ನಿಂದ ಕೆಳಗೆ ಬೀಳುತ್ತಿದ್ದಂತೆ, ಚಾಕುವಿನಿಂದ 4-5 ಬಾರಿ ಇರಿದು ಪರಾರಿಯಾಗಿದ್ದಾರೆ. ಕಣ್ಣೆದುರಲ್ಲೇ ನಡೆದ ಘಟನೆಯಿಂದ ಸುತ್ತಲಿನ ಜನ ಬೆಚ್ಚಿಬಿದ್ದಿದ್ದಾರೆ.

ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ವಿಜಯ್ ನನ್ನು ಕೆಲ ಸಮಯದ ಬಳಿಕ, ಅಲ್ಲಿದ್ದವರು ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ, ಮಾರ್ಗ ಮಧ್ಯದಲ್ಲೇ ವಿಜಯ್ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಸ್ಥಳೀಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...