alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಳ್ಳಂಬೆಳಿಗ್ಗೆ ಬೀದಿಗಿಳಿದ ಮಹಿಳೆಯರು ಮಾಡಿದ್ದೇನು ಗೊತ್ತಾ…?

ಗದಗ: ತೊಟ್ಟಿಲು ತೂಗುವ ಕೈ ಎಲ್ಲದಕ್ಕೂ ಸೈ ಎಂಬ ಮಾತಿದೆ. ಈ ಮಾತಿಗೆ ಪೂರಕವಾದ ಘಟನೆಯೊಂದು ಗದಗ ಜಿಲ್ಲೆ ಮುಂಡರಗಿ ಬಳಿಯ ಡಂಬಳ ಗ್ರಾಮದಲ್ಲಿ ನಡೆದಿದೆ.

ಬೆಳ್ಳಂಬೆಳಿಗ್ಗೆ ಗುಂಪುಗೂಡಿದ ಗ್ರಾಮದ ಮಹಿಳೆಯರು, ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ವಾಹನದ ಮೇಲೆ ದಾಳಿ ಮಾಡಿದ್ದಾರೆ. ವಾಹನದ ಗಾಜು ಒಡೆದು ಹಾಕಿದ್ದಲ್ಲದೇ, ಅದರಲ್ಲಿದ್ದ ಮದ್ಯದ ಬಾಕ್ಸ್ ಗಳನ್ನು ರಸ್ತೆಗೆ ಎಸೆದು ಚೆಲ್ಲಾಪಿಲ್ಲಿ ಮಾಡಿದ್ದಾರೆ.

ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟದಿಂದ ಕುಟುಂಬಗಳ ನೆಮ್ಮದಿ ಹಾಳಾಗಿದ್ದು, ಇದರಿಂದ ರೋಸಿ ಹೋದ ಮಹಿಳೆಯರು ಪೊಲೀಸರಿಗೆ ಅಕ್ರಮ ಮದ್ಯಕ್ಕೆ ಕಡಿವಾಣ ಹಾಕಲು ಮನವಿ ಮಾಡಿದ್ದಾರೆ. ಆದರೂ, ಯಾವುದೇ ಕ್ರಮ ಕೈಗೊಳ್ಳದ ಕಾರಣ ತಾವೇ ಕ್ರಮ ಕೈಗೊಂಡಿದ್ದಾರೆ.

ಬೆಳ್ಳಂಬೆಳಿಗ್ಗೆ ಅಕ್ರಮ ಮದ್ಯ ಪೂರೈಕೆ ವಾಹನ ಆಗಮಿಸುತ್ತಿದ್ದಂತೆ, ಅದರ ಮೇಲೆ ದಾಳಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮದ್ಯದ ಬಾಕ್ಸ್ ಗಳನ್ನು ರಸ್ತೆಗೆ ಸುರಿದಿದ್ದಾರೆ. ಮಹಿಳೆಯರ ಹೋರಾಟಕ್ಕೆ ಗ್ರಾಮದ ಕೆಲವು ಯುವಕರು ಸಾಥ್ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...