alex Certify
ಕನ್ನಡ ದುನಿಯಾ       Mobile App
       

Kannada Duniya

ಓಡಿ ಹೋದ ಅಪ್ರಾಪ್ತ ಜೋಡಿ, ಆಗಿದ್ದೇನು ನೋಡಿ….

ಗದಗ: ಗದಗ ಜಿಲ್ಲೆ ನರಗುಂದ ತಾಲ್ಲೂಕಿನ ಚಿಕ್ಕನರಗುಂದ ಗ್ರಾಮದಲ್ಲಿ ಅಪ್ರಾಪ್ತ ಜೋಡಿ ಮನೆ ಬಿಟ್ಟು ಹೋಗಿದ್ದು, ಇದೇ ವಿಚಾರಕ್ಕೆ ಹೈಡ್ರಾಮಾ ನಡೆದಿದೆ.

19 ವರ್ಷದ ಯುವಕ, 17 ವರ್ಷದ ಯುವತಿ ಪ್ರೀತಿಸಿದ್ದು, ಮನೆ ಬಿಟ್ಟು ಹೋಗಿದ್ದಾರೆ. ಇವರ ಮದುವೆಗೆ ಪೋಷಕರ ವಿರೋಧವಿದ್ದ ಕಾರಣ ಮನೆ ಬಿಟ್ಟು ಹೋಗಿದ್ದರೆನ್ನಲಾಗಿದ್ದು, ಪೊಲೀಸರು ಯುವ ಜೋಡಿಯನ್ನು ಹುಡುಕಿ ಗ್ರಾಮಕ್ಕೆ ಕರೆದುಕೊಂಡು ಬಂದಿದ್ದಾರೆ.

ಯುವತಿ ಪ್ರಿಯಕರನೊಂದಿಗೆ ಹೋದ ಕಾರಣ ಆಕೆಯನ್ನು ಮನೆಗೆ ಸೇರಿಸಿಕೊಳ್ಳುವುದಿಲ್ಲ ಎಂದು ಆಕೆಯ ಪೋಷಕರು ಹೇಳಿದ್ದು, ಅವರಿಗೆ ಪೊಲೀಸ್ ಅಧಿಕಾರಿ ಬೆದರಿಸಿದ್ದಾರೆ ಎನ್ನಲಾಗಿದೆ. ಇನ್ನು ಯುವಕನ ಮನೆಯವರೂ ಕೂಡ ಮನೆಗೆ ಸೇರಿಸಿಕೊಳ್ಳಲು ವಿರೋಧಿಸಿದ್ದು, ಇದರಿಂದಾಗಿ ಹೈಡ್ರಾಮಾವೇ ನಡೆದು ಹೋಗಿದೆ.

ದೂರು ನೀಡದಿದ್ದರೂ, ಮನೆಯ ಹಿರಿಯನನ್ನು ಠಾಣೆಗೆ ಎಳೆದೊಯ್ದು ಪೊಲೀಸರು ದರ್ಪ ತೋರಿದ್ದಾರೆ ಎಂದು ಯುವತಿ ಮನೆಯವರು ಆರೋಪಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...