alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರೇಯಸಿ ಭೇಟಿಗೆ ಬಂದ ಸರಗಳ್ಳ, ಏನಾಯ್ತು ಗೊತ್ತಾ..?

gadag-firi

ಗದಗ: ಕುಖ್ಯಾತ ಸರಗಳ್ಳನಾಗಿರುವ ಆತ ಗದಗ, ಹುಬ್ಬಳ್ಳಿ ಪೊಲೀಸರಿಗೆ ಬೇಕಾದ ವ್ಯಕ್ತಿಯಾಗಿದ್ದಾನೆ. ನಿನ್ನೆ ತಡರಾತ್ರಿ ಆತ ಪ್ರೇಯಸಿಯ ಭೇಟಿಗೆ ಬಂದಿದ್ದಾಗ, ಪೊಲೀಸರು ಹಿಡಿಯಲು ಮುಂದಾಗಿದ್ದು, ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದಾನೆ.

ಗದಗದ ಹಳೆ ಬಸ್ ನಿಲ್ದಾಣದ ಬಳಿ ಸರಗಳ್ಳ ವಿಶ್ವನಾಥನನ್ನು ಹಿಡಿಯಲು ಪೊಲೀಸರು ಫೈರಿಂಗ್ ಮಾಡಿದ್ದಾರೆ. ಹುಬ್ಬಳ್ಳಿಯ ಅಶೋಕನಗರ ಠಾಣೆ ಇನ್ಸ್ ಪೆಕ್ಟರ್ ಗುಂಡು ಹಾರಿಸಿದರೂ ವಿಶ್ವನಾಥ ತಪ್ಪಿಸಿಕೊಂಡಿದ್ದಾನೆ.

ಹಲವಾರು ಸರಗಳ್ಳ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ವಿಶ್ವನಾಥ, ಪ್ರೇಯಸಿ ಭೇಟಿ ಮಾಡಲು ಗದಗಕ್ಕೆ ಬಂದಿದ್ದು, ಈ ಮಾಹಿತಿ ತಿಳಿದ ಪೊಲೀಸರು ಆತನನ್ನು ಸೆರೆಹಿಡಿಯಲು ಆಗಮಿಸಿದ್ದಾರೆ.

ಆತ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಗುಂಡು ಹಾರಿಸಿದ್ದಾರೆ. ಆದರೂ ವಿಶ್ವನಾಥ ಪೊಲೀಸರಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...