alex Certify
ಕನ್ನಡ ದುನಿಯಾ       Mobile App
       

Kannada Duniya

ಹೋಳಿ ವಿಚಾರಕ್ಕೆ ಗಲಾಟೆ, ಘರ್ಷಣೆಯಲ್ಲಿ ನಾಲ್ವರಿಗೆ ಗಾಯ

ಗದಗ: ಗದಗ ಜಿಲ್ಲೆ ಶಿರಹಟ್ಟಿ ತಾಲ್ಲೂಕಿನ ಯಳವಟ್ಟಿಯಲ್ಲಿ ಹೋಳಿಹಬ್ಬದ ಕಾಮದಹನದ ವಿಚಾರವಾಗಿ ಆರಂಭವಾದ ಜಗಳ ಘರ್ಷಣೆಗೆ ತಿರುಗಿದೆ.

ಗುಂಪುಘರ್ಷಣೆಯಲ್ಲಿ ವಿಕಲಚೇತನ ಮಹಿಳೆ ಸೇರಿ ನಾಲ್ವರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಶಿರಹಟ್ಟಿ ಆಸ್ಪತ್ರೆಗೆ ಸೇರಿಸಲಾಗಿದೆ. ಗ್ರಾಮದ ಕಾಲೋನಿಯೊಂದರಲ್ಲಿ ಕಾಮದಹನದ ವಿಚಾರವಾಗಿ 2 ಕುಟುಂಬಗಳ ನಡುವೆ ಜಗಳವಾಗಿದೆ.

ಪಂಚಾಯಿತಿ ಚುನಾವಣೆಯ ಕಾರಣದಿಂದ ಹಿಂದಿನಿಂದಲೂ ಈ ಕುಟುಂಬಗಳ ನಡುವೆ ಹಳೆಯ ದ್ವೇಷವಿದ್ದು, ಹೋಳಿ ಕಾರಣದಿಂದ ಘರ್ಷಣೆಗೆ ತಿರುಗಿದೆ. ಫಕೀರಪ್ಪ ಮತ್ತು ಬಸವಣ್ಯಪ್ಪ ಅವರ ಕುಟುಂಬಗಳ ನಡುವಿನ ರಾಜಕೀಯ ವೈಷಮ್ಯ ಹೋಳಿ ಹಬ್ಬದ ಘರ್ಷಣೆಗೆ ಕಾರಣವಾಗಿದೆ.

ಶಿರಹಟ್ಟಿ ಠಾಣೆ ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಘರ್ಷಣೆಯಿಂದಾಗಿ ಗ್ರಾಮದಲ್ಲಿ ಬಿಗುವಿನ ವಾತಾವರಣ ಉಂಟಾಗಿದ್ದು, ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...