alex Certify
ಕನ್ನಡ ದುನಿಯಾ       Mobile App
       

Kannada Duniya

ಗದಗದಲ್ಲಿ ಭಾರೀ ಗಾಳಿಗೆ ಮನೆ ಮೇಲಿಂದ ಬಿದ್ದು ಇಬ್ಬರು ಸಾವು…!

ಗದಗ: ಭಾರೀ ಗಾಳಿಗೆ ಮನೆ ಮೇಲಿನಿಂದ ಬಿದ್ದು ಇಬ್ಬರು ಸಾವು ಕಂಡ ದುರಂತ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ.

ಅಸೂಟಿ ಗ್ರಾಮದ ನಿವಾಸಿಗಳಾಗಿರುವ ಎಚ್ಚರಪ್ಪ ಬಾರಕೇರ, ಮಹದೇವಪ್ಪ ಕಮ್ಮಾರ ಮೃತಪಟ್ಟವರೆಂದು ಗುರುತಿಸಲಾಗಿದೆ.

ಗದಗ ಜಿಲ್ಲೆ ರೋಣ ತಾಲ್ಲೂಕಿನ ಮೇಲ್ಮಠ ಗ್ರಾಮದಲ್ಲಿ ಇಬ್ಬರೂ ಮನೆಯ ಛಾವಣಿಗೆ ತಗಡು ಜೋಡಿಸುವ ಸಂದರ್ಭದಲ್ಲಿ ಭಾರೀ ಗಾಳಿ ಬೀಸಿದ್ದು, ತಗಡಿನ ಸಮೇತ ಇಬ್ಬರೂ ಹಾರಿ ಕೆಳಗೆ ಬಿದ್ದಿದ್ದಾರೆ.

ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಮಾರ್ಗಮಧ್ಯದಲ್ಲೇ ಸಾವನ್ನಪ್ಪಿದ್ದಾರೆ. ರೋಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...