alex Certify
ಕನ್ನಡ ದುನಿಯಾ       Mobile App
       

Kannada Duniya

ದಲಿತ ಸಿಎಂ ಪರ ಮತ್ತೆ ಪರಮೇಶ್ವರ್ ಬ್ಯಾಟಿಂಗ್

G Parameshwara

ಸಕಲೇಶಪುರ: ರಾಜ್ಯದಲ್ಲಿ ದಲಿತರೊಬ್ಬರು ಮುಖ್ಯಮಂತ್ರಿ ಆಗಬೇಕೆಂಬ ಮಾತುಗಳು ಆಗಾಗ ಕೇಳಿಬರುತ್ತಿವೆ. ಈ ಮಾತುಗಳು ಕೇಳಿಬಂದ ಸಂದರ್ಭದಲ್ಲಿ, ಕೆಲವರ ಹೆಸರು ಮುಂಚೂಣಿಗೆ ಬರುತ್ತವೆ. ಜೊತೆಗೆ ತೀವ್ರ ಚರ್ಚೆಗೂ ಕಾರಣವಾಗಿ, ಅಷ್ಟೇ ಬೇಗದಲ್ಲಿ ತಣ್ಣಗಾಗುತ್ತದೆ.

ಇದೀಗ, ಮತ್ತೆ ದಲಿತ ಸಿಎಂ ವಿಚಾರ ಪ್ರಸ್ತಾಪವಾಗಿದೆ. ಕೆಪಿಸಿಸಿ ಅಧ್ಯಕ್ಷ ಹಾಗೂ ಗೃಹಸಚಿವರಾದ ಡಾ.ಜಿ.ಪರಮೇಶ್ವರ್ ದಲಿತ ಸಿಎಂ ವಿಚಾರವನ್ನು ಮತ್ತೆ ಪ್ರಸ್ತಾಪಿಸಿ, ಗಮನ ಸೆಳೆದಿದ್ದಾರೆ. ಸಕಲೇಶಪುರದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ದಲಿತರೊಬ್ಬರು ಮುಖ್ಯಮಂತ್ರಿಯಾಗಬೇಕು ಎಂದು ಹೇಳಿದ್ದಾರೆ. ನಾನೇ ಸಿಎಂ ಆಗಬೇಕೆಂದು ಈ ಮಾತನ್ನು ಹೇಳುತ್ತಿಲ್ಲ. ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅಥವಾ ವಿ.ಶ್ರೀನಿವಾಸಪ್ರಸಾದ್ ಯಾರಾದರೂ ಸಿಎಂ ಆಗಲಿ ಎಂದು ಹೇಳಿದ್ದಾರೆನ್ನಲಾಗಿದೆ.

ಹಿಂದುಳಿದವರ ಪಟ್ಟಿಯಿಯಿಂದ ನಾವು ಹೊರಬರುವುದು ಯಾವಾಗ? ಎಂದು ಪ್ರಶ್ನಿಸಿದ ಪರಮೇಶ್ವರ್, ದಲಿತರು ಸಿಎಂ ಆದಕೂಡಲೇ, ಭಾರೀ ಬದಲಾವಣೆಯೇನೂ ಆಗುವುದಿಲ್ಲ. ನಾವು ಅಧಿಕಾರ ನಡೆಸಲು ಅರ್ಹರು. ಸರ್ಕಾರ ಮುನ್ನಡೆಸಲು ಶಕ್ತರು ಎಂಬುದನ್ನು ತೋರಿಸಬೇಕಿದೆ ಎಂದು ಹೇಳಿರುವುದಾಗಿ ತಿಳಿದುಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...