alex Certify
ಕನ್ನಡ ದುನಿಯಾ       Mobile App
       

Kannada Duniya

ಸಂಸದ ಸಿದ್ದೇಶ್ವರ್ ಮನೆಯಲ್ಲಿ ಮುಂದುವರೆದ ಶೋಧ

gms-s

ಚಿತ್ರದುರ್ಗ/ ದಾವಣಗೆರೆ: ಕೇಂದ್ರದ ಮಾಜಿ ಸಚಿವ ಹಾಗೂ ದಾವಣಗೆರೆ ಕ್ಷೇತ್ರದ ಲೋಕಸಭೆ ಸದಸ್ಯ ಜಿ.ಎಂ. ಸಿದ್ದೇಶ್ವರ್ ಅವರ ಮನೆ ಹಾಗೂ ವಹಿವಾಟು ಕೇಂದ್ರಗಳ ಮೇಲೆ ಐ.ಟಿ. ದಾಳಿ ನಡೆದಿದ್ದು, 2 ನೇ ದಿನವೂ ಪರಿಶೀಲನೆ ಕಾರ್ಯ ಮುಂದುವರೆದಿದೆ.

30 ಕ್ಕೂ ಅಧಿಕ ಐ.ಟಿ. ಅಧಿಕಾರಿಗಳು ನಿನ್ನೆ ಬೆಳಿಗ್ಗೆಯಿಂದ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಜಿ.ಎಂ. ಸೌಹಾರ್ದ ಸಹಕಾರಿ ಪತ್ತಿನ ಸಂಘದ ಕಚೇರಿ, ಭೀಮಸಮುದ್ರದಲ್ಲಿರುವ ನಿವಾಸ, ಅಡಿಕೆ ಮಂಡಿ, ಚಿತ್ರದುರ್ಗ ತಾಲ್ಲೂಕಿನ ಮೇಗಲವಳ್ಳಿಯ ಗುಟ್ಕಾ ಕಾರ್ಖಾನೆ ಸೇರಿದಂತೆ ಅನೇಕ ಸ್ಥಳಗಳಲ್ಲಿ ದಾಳಿ ಮಾಡಿ ದಾಖಲೆಗಳನ್ನು ಪರಿಶೀಲಿಸಲಾಗಿದೆ.

ಸಿದ್ದೇಶ್ವರ್ ಅವರು ಶಿಕ್ಷಣ ಸಂಸ್ಥೆ, ಅಡಿಕೆ ವಹಿವಾಟು, ಸಹಕಾರಿ ಸಂಸ್ಥೆ, ಗುಟ್ಕಾ ಕಾರ್ಖಾನೆ ಮೊದಲಾದವುಗಳನ್ನು ಹೊಂದಿದ್ದು, ಕೇಂದ್ರೀಯ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪರಿಶೀಲನೆ ಕಾರ್ಯ ಮುಂದುವರೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕರಾವಳಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ರಾಜ್ಯ ಸರ್ಕಾರ ವಿಫಲವಾಗಿದೆಯೇ..?

    View Results

    Loading ... Loading ...