alex Certify
ಕನ್ನಡ ದುನಿಯಾ       Mobile App
       

Kannada Duniya

ಕಲ್ಲಡ್ಕ ಶಿಕ್ಷಣ ಸಂಸ್ಥೆಗಳಿಗೆ ಮೈತ್ರಿ ಸರ್ಕಾರದಿಂದ ಮತ್ತೆ ಅನ್ನ ದಾಸೋಹದ ಅನುದಾನ

ಬಂಟ್ವಾಳದ ಕಲ್ಲಡ್ಕ ಶಿಕ್ಷಣಸಂಸ್ಥೆಯ ಸಾವಿರಾರು ಮಕ್ಕಳಿಗೆ ಈಗ ಅನ್ನದಾಸೋಹದ ಭಾಗ್ಯ ಮತ್ತೆ ಒದಗಿ ಬಂದಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಈ ಅನುದಾನ ಬಿಡುಗಡೆ ಮಾಡಿದ್ದಾರೆ.

ಆರೆಸ್ಸೆಸ್ ಮುಖಂಡ ಪ್ರಭಾಕರ ಭಟ್ ಅವರ ಅಧ್ಯಕ್ಷತೆಯ ಕಲ್ಲಡ್ಕ ಶಿಕ್ಷಣ ಸಂಸ್ಥೆಗೆ ಸಿಗುತ್ತಿದ್ದ ಅನ್ನದಾಸೋಹದ ಸರ್ಕಾರಿ ಅನುದಾನವನ್ನು ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಸ್ಥಗಿತಗೊಳಿಸಿದ್ದರು. ಮಾಜಿ ಶಾಸಕ ರಮಾನಾಥ ರೈ ಅವರು ಈ ದಾಸೋಹ ವ್ಯವಸ್ಥೆ ಸ್ಥಗಿತ ವಿಚಾರಕ್ಕೆ ಬಲಿಯಾಗಿ ಈ ಬಾರಿ ಚುನಾವಣೆಯಲ್ಲಿ ಸೋತರು ಎಂಬ ಮಾತುಗಳು ಕೇಳಿಬಂದಿದ್ದವು.

ಕಲ್ಲಡ್ಕ ಪ್ರಭಾಕರ ಭಟ್ ಅವರ ಮನವಿಯನ್ನು ಪುರಸ್ಕರಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಅಕ್ಕಿ, ಬೇಳೆ, ಎಣ್ಣೆ ಸೇರಿದಂತೆ ಎಲ್ಲಾ ದಿನಸಿ ಹಾಗೂ ಅಡುಗೆ ಕೆಲಸದವರ ನಿರ್ವಹಣೆಗೆ ಸಂಬಂಧಿಸಿದ ಅನುದಾನವನ್ನು ಮಂಜೂರು ಮಾಡಿದ್ದಾರೆ.

ಕಳೆದ ಬಾರಿ ಸಿದ್ದರಾಮಯ್ಯನವರು ರಮಾನಾಥ ರೈ ಅವರ ಮನವಿಯಂತೆ ನಮ್ಮ ಸಂಸ್ಥೆಯ ದಾಸೋಹ ಅನುದಾನ ಸ್ಥಗಿತಗೊಳಿಸಿ ದ್ವೇಷದ ರಾಜಕೀಯ ಮಾಡಿದ್ದರು ಎಂದು ಈ ಸಂದರ್ಭದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಆರೋಪಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...