alex Certify
ಕನ್ನಡ ದುನಿಯಾ       Mobile App
       

Kannada Duniya

ದೆಹಲಿಯಲ್ಲಿ ಬಡವರ ದಾಹ ಇಂಗಿಸುತ್ತಿದ್ದಾರೆ ನಮ್ಮ ಬೆಂಗಳೂರಿಗ

ನಗರ ಪ್ರದೇಶಗಳಲ್ಲಿ ಬಾಯಾರಿಕೆ ಎನ್ನುವುದು ಪ್ರತಿ ದಿನದ ಸಂಕಟ. ದುಡ್ಡಿದ್ದವರಿಗೆ ಬಾಟಲಿ ನೀರಿದೆ. ಬಡವರಿಗೆ ದಾಹ ತಣಿಸಲು ಶುದ್ಧ ನೀರು ಎಲ್ಲಿದೆ? ಸಾವಿರಾರು ಮಂದಿ ರಿಕ್ಷಾ ಗಾಡಿಯವರು, ಬೀದಿ ಬದಿಯ ವರ್ತಕರು, ಪೌರ ಕಾರ್ಮಿಕರಿಗೆ ದಿನಕ್ಕೆ ಹತ್ತಾರು ಬಾರಿ ವೆಂಡಿಂಗ್ ಕಿಯೋಸ್ಕ್ ಗಳಿಂದ ಕಾಸು ಕೊಟ್ಟು ನೀರು ಕುಡಿಯಲು ಸಾಧ್ಯವಾಗುವುದಿಲ್ಲ. ಇಂತಹವರ ದಾಹ ಇಂಗಿಸುವ ಸಲುವಾಗಿಯೇ ದೇಶದ ರಾಜಧಾನಿಯಲ್ಲಿ ಅಲ್ಲಲ್ಲಿ ಸಾಂಪ್ರದಾಯಿಕ ಮಡಿಕೆಗಳನ್ನು ಇಡಲಾಗಿದೆ. ಇದಕ್ಕೆ ಪ್ರತಿ ದಿನ ನೀರು ತುಂಬಿಸಲಾಗುತ್ತದೆ.

ಈ ಮಡಿಕೆಗಳ ಹಿಂದೆ ಇರುವವರು 69 ವರ್ಷದ ಒಬ್ಬ ವ್ಯಕ್ತಿ. ಅವರು ಪ್ರತಿದಿನ ನಸುಕಿನಲ್ಲೇ ತಮ್ಮ ವ್ಯಾನ್‌ನಲ್ಲಿ ನೀರು ತುಂಬಿಸಿಕೊಂಡು ಮನೆ ಬಿಡುತ್ತಾರೆ. ಬಡವರಿಗೆ ಕುಡಿಯಲೆಂದೇ ನಗರಾದ್ಯಂತ ಅಲ್ಲಲ್ಲಿ ಇಟ್ಟು ಬರುತ್ತಾರೆ. ಇವರೀಗ ದೆಹಲಿಯಲ್ಲಿ ಮಡಿಕೆ ಮನುಷ್ಯ ಎಂದೇ ಪ್ರಸಿದ್ಧರು. ಇವರ ಹೆಸರು ಅಲಗರಥನಂ ನಟರಾಜನ್.

ಕ್ಯಾನ್ಸರ್ ಗೆದ್ದು ಬಂದಿರುವ ಇವರು ಮೂಲತಃ ಬೆಂಗಳೂರಿನವರು. ಬಳಿಕ ಬ್ರಿಟನ್‌ನಲ್ಲಿ ಉದ್ಯಮಿಯಾಗಿದ್ದವರು. ಸದ್ಯ ಬಡವರಿಗೆ ಮಡಿಕೆ ನೀರು ನೀಡುವಲ್ಲಿ ನೆಮ್ಮದಿ ಕಂಡುಕೊಂಡಿದ್ದಾರೆ. 2014ರ ಬೇಸಿಗೆಯಲ್ಲಿ ಬಡವರಿಗೆ ದೆಹಲಿಯಲ್ಲಿ ಕುಡಿಯುವ ನೀರಿನ ಕೊರತೆಯಿದೆ ಎಂಬ ಸಂಗತಿ ಇವರ ಅರಿವಿಗೆ ಬಂತು. ಮೊದಲು ತಮ್ಮ ಮನೆಯ ಹೊರಗಡೆ ಒಂದು ವಾಟರ್ ಕೂಲರ್ ಅನ್ನು ಇಟ್ಟರು. ಅಲ್ಲಿ ನೀರು ಕುಡಿಯಲು ದೂರದ ಸ್ಥಳಗಳಿಂದ ಬರುವ ಜನರನ್ನು ಕಂಡು ಅಲ್ಲಲ್ಲಿ ಮಡಿಕೆಗಳನ್ನಿಟ್ಟು ನೀರು ತುಂಬಿಸಲು ಆರಂಭಿಸಿದರು.

ತಮ್ಮ ವ್ಯಾನ್‌ಗೆ 800 ಲೀ. ಟ್ಯಾಂಕ್, ಪಂಪ್ ಅನ್ನು ಜೋಡಿಸಿಕೊಂಡಿದ್ದಾರೆ. ಪ್ರತಿದಿನ ವ್ಯಾನ್ ಒಯ್ದು ಮಡಿಕೆಗಳಿಗೆ ನೀರು ಭರ್ತಿ ಮಾಡುತ್ತಾರೆ. ಬೇಸಿಗೆಯಲ್ಲಿ ದಿನಕ್ಕೆ ನಾಲ್ಕು ಬಾರಿ ಬಂದು ಸದಾ ಮಡಿಕೆಯಲ್ಲಿ ನೀರು ತುಂಬಿರುವಂತೆ ನೋಡಿಕೊಳ್ಳುತ್ತಾರೆ ನಟರಾಜನ್.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...