alex Certify
ಕನ್ನಡ ದುನಿಯಾ       Mobile App
       

Kannada Duniya

ಸಾವಿನಲ್ಲೂ ಒಂದಾದ ‘ಕುಚುಕು’ ಗೆಳೆಯರು

friendship

ಸ್ನೇಹಕ್ಕೆ ಸಾವಿಲ್ಲ, ಸ್ನೇಹಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಸ್ನೇಹ ಸಂಬಂಧಕ್ಕಿಂತ ದೊಡ್ಡದು, ಮೊದಲಾದ ಮಾತುಗಳು ಸ್ನೇಹಕ್ಕಿರುವ ಸ್ಥಾನವನ್ನು ಸಾರಿ ಹೇಳುತ್ತವೆ. ಈ ಮಾತಿಗೆ ನಿದರ್ಶನ ಎನ್ನುವಂತಹ ಘಟನೆಯೊಂದು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಹೊಲಗೇರಿ ಗ್ರಾಮದಲ್ಲಿ ನಡೆದಿದೆ.

ಈ ಗ್ರಾಮದಲ್ಲಿ ಇಂದು ಬೆಳಿಗ್ಗೆ ಹೃದಯಾಘಾತದಿಂದ 54 ವರ್ಷದ ಬಸಪ್ಪ ಉಂಡಿ ಅವರು ಮೃತಪಟ್ಟಿದ್ದರು. ಮನೆಯ ಮುಂದೆ ಅವರ ಶವವನ್ನು ಇಟ್ಟಿದ್ದು, ಗ್ರಾಮಸ್ಥರು, ಬಂಧುಗಳೆಲ್ಲಾ ಅಂತಿಮ ದರ್ಶನ ಪಡೆಯುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ 54 ವರ್ಷದ ಮರಿಯಪ್ಪ ಕಟ್ಟಿಮನಿ ಅವರು ಮೃತದೇಹಕ್ಕೆ ಹಾರ ಹಾಕುವಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಬಸಪ್ಪ ಮತ್ತು ಮರಿಯಪ್ಪ ಇಬ್ಬರೂ ಜೀವದ ಗೆಳೆಯರು. ಚಿಕ್ಕಂದಿನಿಂದಲೂ ಆಡಿ ಬೆಳೆದವರು. ಇವರ ಸ್ನೇಹವನ್ನು ಕಂಡ ಕೆಲವರು ಕುಚುಕು ಗೆಳೆಯರು ಎನ್ನುತ್ತಿದ್ದರು.

ಸ್ನೇಹಿತ ಬಸಪ್ಪನ ಅಗಲಿಕೆಯ ನೋವನ್ನು ತಾಳದೇ ಮರಿಯಪ್ಪ ಸ್ನೇಹಿತನ ದೇಹಕ್ಕೆ ಹಾರ ಹಾಕುವಾಗಲೇ ಮೃತಪಟ್ಟಿದ್ದಾನೆ. ಇವರ ನಿಧನದಿಂದ ಗ್ರಾಮಕ್ಕೆ ಗ್ರಾಮವೇ ಕಂಬನಿ ಮಿಡಿದಿದ್ದು, ಸ್ನೇಹಿತರೆಂದರೆ ಹೀಗಿರಬೇಕು ಎಂದು ಮಾತಾಡಿಕೊಂಡರು. ಬಸಪ್ಪನ ಸಾವಿಗೆ ಸ್ನೇಹಿತ ಮರಿಯಪ್ಪನೂ ಜೊತೆಯಾಗಿದ್ದು ನೋಡಿದವರ ಮನ ಕಲಕುವಂತಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...