alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿ ಜೊತೆ ಅಸಭ್ಯ ವರ್ತನೆ ತೋರಿದ ಸ್ನೇಹಿತನ ಕೊಲೆ

murder-1 kan

ಅವರಿಬ್ಬರು ಬಾಲ್ಯದಿಂದಲೂ ಗೆಳೆಯರು. ದೊಡ್ಡವರಾದ ನಂತರವೂ ಅವರ ಗೆಳೆತನ ಮುಂದುವರೆದಿತ್ತು. ಬೇರೆ ಬೇರೆ ಕೆಲಸ ಮಾಡುತ್ತಿದ್ದರೂ ಒಟ್ಟಿಗೆ ಸೇರುತ್ತಿದ್ದರು. ಪತ್ನಿಯ ಜೊತೆಗೆ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಬಾಲ್ಯದ ಗೆಳೆಯನನ್ನೇ ಕೊಂದು ಹಾಕಿದ್ದಾನೆ ಈ ಯುವಕ.

ಬೆಂಗಳೂರಿನ ವಿನಾಯಕ ನಗರದ ಕೊಳಗೇರಿಯಲ್ಲಿ ವಾಸವಾಗಿದ್ದ 21 ವರ್ಷದ ಶರತ್ ಕೊಲೆಯಾದ ಯುವಕ. ಈತನ ಸ್ನೇಹಿತ ದೀಪು ಕೊಲೆ ಆರೋಪಿ. ಅಕ್ಕಪಕ್ಕದ ನಿವಾಸಿಗಳಾದ ಶರತ್ ಮತ್ತು ದೀಪು ಸದಾಕಾಲ ಜೊತೆಯಾಗಿರುತ್ತಿದ್ದರು. ಇತ್ತೀಚೆಗಷ್ಟೇ ದೀಪುಗೆ ಮದುವೆಯಾಗಿದ್ದು, ಆತನ ಪತ್ನಿಯ ಜೊತೆಗೆ ಶರತ್ ಅಸಭ್ಯವಾಗಿ ವರ್ತಿಸುತ್ತಿದ್ದ. ಗೆಳೆಯನಿಲ್ಲದ ಸಮಯದಲ್ಲಿ ಮನೆಗೆ ಹೋಗುತ್ತಿದ್ದ. ಇದೇ ಕಾರಣಕ್ಕೆ ಇವರಿಬ್ಬರ ನಡುವೆ ಮನಸ್ತಾಪ ಮೂಡಿತ್ತು ಎಂದು ಹೇಳಲಾಗಿದೆ.

ಮದ್ಯ ಸೇವಿಸುವ ನೆಪದಲ್ಲಿ ಶರತ್ ನನ್ನು ವಿಲ್ಸನ್ ಗಾರ್ಡನ್ ಸ್ಮಶಾನಕ್ಕೆ ಕರೆದುಕೊಂಡ ಹೋದ ದೀಪು, ವಿಪರೀತ ಮದ್ಯ ಕುಡಿಸಿ ಗೆಳೆಯನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ. ಜೊತೆಯಾಗಿ ಸ್ಮಶಾನಕ್ಕೆ ಹೋಗಿ ಒಬ್ಬನೇ ಬಂದಿದ್ದರಿಂದ ಅನುಮಾನಗೊಂಡ ಅಲ್ಲಿದ್ದವರು ಪ್ರಶ್ನಿಸಿದ್ದು, ದೀಪು ಅಲ್ಲಿಂದ ಪರಾರಿಯಾಗಿದ್ದಾನೆ. ಈ ಸಂಬಂಧ ವಿಲ್ಸನ್ ಗಾರ್ಡನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...