alex Certify
ಕನ್ನಡ ದುನಿಯಾ       Mobile App
       

Kannada Duniya

ಮೊದಲ ಬಾರಿ ಓಟ್ ಮಾಡಿದವರಿಗೆ ದೋಸೆ, ಕಾಫಿ ಫ್ರೀ…!

ಇವತ್ತು ಕರ್ನಾಟಕಕ್ಕೆ ಮಹತ್ವದ ದಿನ. ಮುಂದಿನ ಐದು ವರ್ಷಗಳ ಕಾಲ ನಮ್ಮನಾಳುವ ನಾಯಕರನ್ನು ಆಯ್ಕೆ ಮಾಡುವ ದಿನ. ಅದ್ರಲ್ಲೂ ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಮೊದಲ ಬಾರಿ ಓಟ್ ಹಾಕಿರೋರಿಗೆ ಹುರಿದುಂಬಿಸಲಾಗಿದೆ. ಅಲ್ಲದೆ ಹೊಟೇಲ್ ಒಂದು ಮೊದಲ ಬಾರಿ ಮತದಾನ ಮಾಡೋರಿಗೆ ದೋಸೆ, ಕಾಫಿ ಫ್ರೀ ಅಂತಾ ಆಫರ್ ಕೊಟ್ಟಿತ್ತು.

18 ವರ್ಷ ತುಂಬಿ ಮೊದಲ ಬಾರಿ ಕೈಗೆ ನೀಲಿ ಶಾಹಿ ಹಾಕಿಸಿಕೊಂಡು ಓಟ್ ಮಾಡಿ ಬಂದವರಿಗೆ ವಿಧಾನ ಸೌಧದ ಬಳಿಯಿರುವ ನಿಸರ್ಗ ಹೊಟೇಲ್ ನಲ್ಲಿ ಕಾಫಿ ಮತ್ತು ದೋಸೆಯನ್ನು ಫ್ರೀಯಾಗಿ ನೀಡಲಾಯ್ತು.

ನಿಸರ್ಗ ಹೊಟೇಲ್ ಮಾಲೀಕರಾದ ಕೃಷ್ಣರಾಜ್ ಎಂಬುವರು ಕೆಲ ದಿನಗಳ ಹಿಂದೆ ತಮ್ಮ ಹೊಟೇಲ್ ನಲ್ಲಿ ಯುವಕರ ಗುಂಪೊಂದು ರಾಜ್ಯ ರಾಜಕಾರಣದ ಬಗ್ಗೆ ಚರ್ಚಿಸುತ್ತಿದ್ದು, ಅವರ ಮಾತಲ್ಲಿ ಚುನಾವಣೆ ಬಗ್ಗೆ ನಿರಾಸಕ್ತಿ ಎದ್ದು ಕಾಣ್ತಿತ್ತು. ಈ ವೇಳೆ ಅಲ್ಲಿಗೆ ಹೋದ ಕೃಷ್ಣರಾಜ್ ಓಟ್ ಮಾಡುವಂತೆ ತಿಳಿಹೇಳಿದ್ರು. ಆಗ ಯುವಕರು ಮಸಾಲೆ ದೋಸೆ ಮತ್ತು ಕಾಫಿಯನ್ನ ಫ್ರೀಯಾಗಿ ಕೊಡೋದಾದ್ರೆ ಓಟ್ ಹಾಕ್ತೀವಿ ಅಂತಾ ಹೇಳಿದ್ರಂತೆ. ಇದಕ್ಕೆ ಒಪ್ಪಿದ ಕೃಷ್ಣರಾಜ್ ಇಂದು ದೋಸೆ ಮತ್ತು ಕಾಫಿಯನ್ನ ಫ್ರೀಯಾಗಿ ನೀಡಿದ್ದಾರೆ.

ಇತ್ತ ರಾಜಾಜಿನಗರದ ಸೈಬರ್ ಕೆಫೆಯೊಂದರಲ್ಲಿ ಇಂಟರ್ ನೆಟ್ ಬಳಸಲು ಯುವ ಮತದಾರರಿಗೆ ಉಚಿತ ಪ್ರವೇಶ ಕಲ್ಪಿಸಿತ್ತು. ಇನ್ನೂ ಕೆಲವು ಗುಂಪುಗಳು ಮೊದಲ ಬಾರಿ ಮತದಾನ ಮಾಡಿದವರಿಗೆ ಹೂ ಗುಚ್ಚ ಮತ್ತು ಸಸಿಗಳನ್ನು ಕೊಡುತ್ತಿದ್ದದ್ದು ಕಂಡು ಬಂತು.

ಹೀಗೆ ರಿಯಾಯಿತಿ ನೀಡಿದ ಹೋಟೆಲ್, ಸೈಬರ್ ಕೆಫೆಗಳು ಯಾವುದೇ ರಾಜಕೀಯ ವ್ಯಕ್ತಿಯ, ಪಕ್ಷದ ಪ್ರೇರಣೆಯಿಂದ ಮಾಡಿದ್ದಲ್ಲ. ಇದು ಯುವಕರನ್ನು ಹುರಿದುಂಬಿಸಲು ಮಾಡಿದ ಕೆಲಸವಾಗಿತ್ತು ಅನ್ನೋದು ಖುಷಿಯ ಸಂಗತಿ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...