alex Certify
ಕನ್ನಡ ದುನಿಯಾ       Mobile App
       

Kannada Duniya

ಯುವತಿಯನ್ನು ವಂಚಿಸಿದ ಮ್ಯಾಟ್ರಿಮೋನಿ ಯುವಕ

ಬೆಂಗಳೂರು: ಮ್ಯಾಟ್ರಿಮೋನಿಯೊಂದರಲ್ಲಿ ಪರಿಚಿತನಾದ ಯುವಕ ಹಣ ಪಡೆದು ಯುವತಿಯನ್ನು ವಂಚಿಸಿದ ಘಟನೆ ನಡೆದಿದ್ದು, ಕೋರಮಂಗಲ ಠಾಣೆಗೆ ದೂರು ನೀಡಲಾಗಿದೆ.

29 ವರ್ಷದ ಯುವತಿ ಪ್ರಸಿದ್ಧ ಮ್ಯಾಟ್ರಿಮೋನಿಯೊಂದರಲ್ಲಿ ವರನಿಗಾಗಿ ಹುಡುಕಾಟ ನಡೆಸಿದ್ದಾಳೆ. ಅಮೆರಿಕದ ನ್ಯೂಜೆರ್ಸಿಯಲ್ಲಿ ಉದ್ಯೋಗದಲ್ಲಿರುವುದಾಗಿ ಹೇಳಿಕೊಂಡ ಅಬ್ದುಲ್ ಎಂಬಾತ ಭಾರತಕ್ಕೆ ಬಂದ ಬಳಿಕ ಮದುವೆಯಾಗುವುದಾಗಿ ಭರವಸೆ ನೀಡಿದ್ದಾನೆ.

ನಂತರ ಆಗಸ್ಟ್ 13 ರಂದು ಕರೆ ಮಾಡಿ ಯುವತಿಯ ವಿಳಾಸಕ್ಕೆ ಸರ್ ಪ್ರೈಸ್ ಗಿಫ್ಟ್ ಕಳುಹಿಸುವುದಾಗಿ ತಿಳಿಸಿದ್ದಾನೆ. ಒಂದೆರಡು ದಿನಗಳ ಬಳಿಕ ಕೊರಿಯರ್ ಏಜೆನ್ಸಿಯಿಂದ ಮಾತನಾಡುತ್ತಿರುವುದಾಗಿ ಯುವತಿಯೊಬ್ಬಳು ಕರೆ ಮಾಡಿದ್ದಾಳೆ.

ನಿಮ್ಮ ವಿಳಾಸಕ್ಕೆ 11.64 ಲಕ್ಷ ರೂಪಾಯಿ ಕೊರಿಯರ್ ಬಂದಿದ್ದು, ಶೇ. 18 ರಷ್ಟು ತೆರಿಗೆ ಪಾವತಿಸಬೇಕು. ಎಂದು ತಿಳಿಸಿದ್ದಾಳೆ. ಆಕೆಯ ಮಾತು ನಂಬಿದ ಯುವತಿ ಕೊರಿಯರ್ ಏಜೆನ್ಸಿ ಖಾತೆಗೆ 2.85 ಲಕ್ಷ ರೂ. ವರ್ಗಾಯಿಸಿದ್ದಾಳೆ. ಮತ್ತೆ ಹಣ ನೀಡುವಂತೆ ಕರೆ ಬಂದಿದ್ದು, ಅನುಮಾನದಿಂದ ಪರಿಶೀಲನೆ ನಡೆಸಿದಾಗ ಮೊಬೈಲ್ ಸ್ವಿಚ್ ಆಫ್ ಆಗಿದೆ.

ಅತ್ತ ಮ್ಯಾಟ್ರಿಮೋನಿಯಲ್ಲಿ ಅಬ್ದುಲ್ ಎಂದು ಹೇಳಿಕೊಂಡಿದ್ದವನ ಅಕೌಂಟ್ ಡಿಲಿಟ್ ಆಗಿದೆ. ಇದರಿಂದ ಕಂಗಾಲಾದ ಯುವತಿ ಕೋರಮಂಗಲ ಠಾಣೆಗೆ ದೂರು ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...