alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಡಿನಲ್ಲಿ ಯುವಕರ ನಾಪತ್ತೆ ಪ್ರಕರಣ, ಇಬ್ಬರ ಮೃತದೇಹ ಪತ್ತೆ

ಮಂಗಳೂರು: ದಕ್ಷಿಣಕನ್ನಡ ಜಿಲ್ಲೆ ಮೂಡಬಿದ್ರೆ ತಾಲ್ಲೂಕಿನ ಕರಿಂಜೆ ದಟ್ಟ ಅರಣ್ಯದಲ್ಲಿ 3 ದಿನಗಳಿಂದ ನಾಪತ್ತೆಯಾಗಿದ್ದ ಯುವಕರಿಬ್ಬರ ಮೃತದೇಹ ಪತ್ತೆಯಾಗಿದೆ.

ಪ್ರವೀಣ್ ತಾವ್ರೋ(32), ಗ್ರೇಸನ್(32) ಮೃತಪಟ್ಟವರು. 3 ದಿನಗಳ ಹಿಂದೆ ಇವರು ಬೇಟೆಯ ಉದ್ದೇಶದಿಂದ ಕಾಡಿಗೆ ತೆರಳಿರಬಹುದೆಂದು ಶಂಕಿಸಲಾಗಿದೆ. ಪ್ರವೀಣ್ ಮತ್ತು ಗ್ರೇಸನ್ ಅವರಿಗಾಗಿ 3 ದಿನಗಳಿಂದ ಅರಣ್ಯದಲ್ಲಿ ಹುಡುಕಾಟ ನಡೆಸಲಾಗಿದ್ದು, ಇಂದು ಬೆಳಿಗ್ಗೆ ಜೀಪು ಪತ್ತೆಯಾಗಿತ್ತು.

ಬಳಿಕ ಹೆಚ್ಚಿನ ಹುಡುಕಾಟ ನಡೆಸಿದ ಸಂದರ್ಭದಲ್ಲಿ ಕಾಡಿನಲ್ಲಿ ವಿದ್ಯುತ್ ತಗುಲಿ ಇಬ್ಬರು ಮೃತಪಟ್ಟಿರುವುದು ಕಂಡು ಬಂದಿದೆ. ಹಂದಿಗಳ ಬೇಟೆಗೆ ಇಡಲಾಗಿದ್ದ ವಿದ್ಯುತ್ ಪ್ರವಹಿಸಿ ಇಬ್ಬರೂ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.

ದಟ್ಟ ಅರಣ್ಯದಲ್ಲಿ ವಿದ್ಯುತ್ ಬರಲು ಹೇಗೆ ಸಾಧ್ಯ ಎಂಬ ಶಂಕೆ ವ್ಯಕ್ತವಾಗಿದ್ದು, ಮೂಡಬಿದ್ರೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...