alex Certify
ಕನ್ನಡ ದುನಿಯಾ       Mobile App
       

Kannada Duniya

ದಿನನಿತ್ಯ 300 ಕಿ.ಮೀ. ಪ್ರಯಾಣಿಸುವ ಕುರಿತು ರೇವಣ್ಣ ಹೇಳಿದ್ದೇನು?

ಕುಮಾರಸ್ವಾಮಿ ಸರ್ಕಾರದ, ಸಚಿವರೊಬ್ಬರು ದಿನಕ್ಕೆ 300 ಕಿಲೋಮೀಟರ್ ತಿರುಗಾಟ ನಡೆಸುತ್ತಾರೆ. ಹೌದು….ವಾಸ್ತು ಹಾಗೂ ಜ್ಯೋತಿಷ್ಯವನ್ನು ಅಪಾರವಾಗಿ ನಂಬುವ ಲೋಕೋಪಯೋಗಿ ಸಚಿವ ರೇವಣ್ಣ, ದಿನಂಪ್ರತಿ ಹೊಳೆನರಸೀಪುರದಿಂದ ಬೆಂಗಳೂರಿಗೆ ಪ್ರಯಾಣ ಮಾಡುತ್ತಿದ್ದಾರೆ.

ಇನ್ನು ಬೆಳ್ಳಗೆ 5 ಗಂಟೆಗೆ ರೇವಣ್ಣ ಎದ್ದರೆ ತಮ್ಮ ನಿತ್ಯ ಕರ್ಮಗಳನ್ನು ಮುಗಿಸಿ, ಬೆಂಗಳೂರಿನತ್ತ ಪ್ರಯಾಣ ಬೆಳೆಸುತ್ತಾರೆ. ಬಳಿಕ ಅಧಿವೇಶನದಲ್ಲಿ ಭಾಗವಹಿಸುತ್ತಾರೆ. ಅಲ್ಲದೆ ಸಂಜೆ ಮರಳಿ ಊರಿಗೆ ಹೋಗುವಾಗ ಪದ್ಮನಾಭ ನಗರಕ್ಕೆ ಭೇಟಿ ನೀಡಿ ತಂದೆ, ತಾಯಿ ಆಶೀರ್ವಾದ ಪಡೆದು ನಂತರ ರಾತ್ರಿ ಮಲಗಲು ಮತ್ತೆ ಹೊಳೆನರಸೀಪುರದತ್ತ ಪಯಣ ಬೆಳೆಸುತ್ತಾರೆ.

ಈ ಬಗ್ಗೆ ರೇವಣ್ಣವರನ್ನು ಕೇಳಿದಾಗ, ತಮಗೆ ಸರ್ಕಾರದಿಂದ ಇನ್ನೂ ನಿವಾಸ ಮಂಜೂರಾಗಿಲ್ಲ. ಈ ಕಾರಣದಿಂದ ದಿನನಿತ್ಯ ಓಡಾಟ ನಡೆಸುತ್ತಿದ್ದೇನೆ. ನಿವಾಸ ಮಂಜೂರಾದ ಬಳಿಕ ಬೆಂಗಳೂರಿನಲ್ಲಿಯೇ ಇರುತ್ತೇನೆ ಎಂದು ತಿಳಿಸಿದ್ದಾರೆ.

ಇನ್ನು ರೇವಣ್ಣ ವಾಸ್ತು, ಜ್ಯೋತಿಷ್ಯದಲ್ಲಿ ಹೆಚ್ಚು ನಂಬಿಕೆ ಇಟ್ಟಿದ್ದಾರೆ. ಕುಮಾರಸ್ವಾಮಿಯವರ ಪ್ರಮಾಣವಚನ, ಬಜೆಟ್ ಸೇರಿದಂತೆ ಎಲ್ಲದಕ್ಕೂ ರೇವಣ್ಣರೇ ಸಮಯವನ್ನು ನಿಗದಿಪಡಿಸಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ರೇವಣ್ಣ ಹೊಳೆನರಸೀಪುರದಿಂದ ದಿನನಿತ್ಯ ಓಡಾಟ ನಡೆಸಲು ಜ್ಯೋತಿಷಿಗಳ ಸಲಹೆ ಕಾರಣವಿರಬಹುದಾ ಎಂಬ ಮಾತುಗಳೂ ಕೇಳಿ ಬರುತ್ತಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...