alex Certify
ಕನ್ನಡ ದುನಿಯಾ       Mobile App
       

Kannada Duniya

ಮೊದಲ ಬಾರಿ ಮಹಾಮಸ್ತಕಾಭಿಷೇಕದ ಹೊಣೆ ಹೊತ್ತ ಮಹಿಳೆ

ಜೈನ ಸಮುದಾಯದ ಮಹಾ ಉತ್ಸವವಾದ 88ನೇ ಮಹಾಮಸ್ತಕಾಭಿಷೇಕದ ಉಸ್ತುವಾರಿಯನ್ನು ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರಿಗೆ ವಹಿಸಲಾಗಿದೆ. ಮಹಿಳೆಯನ್ನು ಮಹಾಮಸ್ತಕಾಭಿಷೇಕದ ಮುಖ್ಯಸ್ಥೆಯಾಗಿ ನೇಮಕ ಮಾಡಿರುವುದು 1000 ವರ್ಷಗಳಲ್ಲಿ ಇದೇ ಮೊದಲು.

70 ವರ್ಷದ ಸರಿತಾ ಜೈನ್ ಭಾರತ್ವರ್ಷೀಯ ದಿಗಂಬರ ಜೈನ ತೀರ್ಥಕ್ಷೇತ್ರೀಯ ಸಮಿತಿಯ ಮುಖ್ಯಸ್ಥರಾಗಿದ್ದಾರೆ. ಮಹಾಮಸ್ತಕಾಭಿಷೇಕದ ಯಶಸ್ಸಿಗಾಗಿ ಸರಿತಾ ಕಳೆದ 2 ವರ್ಷಗಳಿಂದ ಶ್ರಮಿಸುತ್ತಿದ್ದಾರೆ. ಮಹಾಮಸ್ತಕಾಭಿಷೇಕದ ನೇತೃತ್ವ ವಹಿಸುವ ಅವಕಾಶ ಸಿಕ್ಕಿರುವುದು ನಿಜಕ್ಕೂ ತಮ್ಮ ಅದೃಷ್ಟ ಎನ್ನುತ್ತಾರೆ ಸರಿತಾ.

12 ವರ್ಷಗಳಿಗೊಮ್ಮೆ ಮಹಾಮಸ್ತಕಾಭಿಷೇಕ ನಡೆಯುತ್ತದೆ. ಫೆಬ್ರವರಿ 7 ರಿಂದ 25ರವರೆಗೆ ಮಹಾಮಸ್ತಕಾಭಿಷೇಕ ನಡೆಯಲಿದೆ. ದೇಶದ ವಿವಿಧ ಮೂಲೆಗಳಿಂದ ಜೈನ ಮುನಿಗಳು, ಭಕ್ತರು ಆಗಮಿಸಲಿದ್ದಾರೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉತ್ಸವವನ್ನು ಉದ್ಘಾಟಿಸಿದ್ದರು.

ಈ ಬಾರಿ ಮಹಾಮಸ್ತಕಾಭಿಷೇಕ ವೀಕ್ಷಿಸಲು ಶ್ರವಣಬೆಳಗೊಳಕ್ಕೆ ಸುಮಾರು 2.25 ಲಕ್ಷ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಮಹಾಮಸ್ತಕಾಭಿಷೇಕಕ್ಕೆ ಸುಮಾರು 176 ಕೋಟಿ ರೂಪಾಯಿ ವೆಚ್ಚವಾಗುವ ಸಾಧ್ಯತೆ ಇದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...