alex Certify
ಕನ್ನಡ ದುನಿಯಾ       Mobile App
       

Kannada Duniya

ಸರ್ಕಾರಿ ಶಾಲೆಗೆ ದೇಣಿಗೆ ನೀಡಿದ್ದಾರೆ ವಿದ್ಯಾರ್ಥಿಗಳು

ಬೆಂಗಳೂರಿನ ಕಲ್ಯಾಣ ನಗರದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ಶ್ರೀಮಂತ ಕುಟುಂಬದ ನಾಲ್ವರು ವಿದ್ಯಾರ್ಥಿಗಳು, ತಮ್ಮ ಉಳಿತಾಯದ ಹಣ ನೀಡುವ ಮೂಲಕ ಮಾನವೀಯ ಕಾರ್ಯ ಮಾಡಿದ್ದಾರೆ.

ನಿಧಿ ಶಂಕರ್ ರೆಡ್ಡಿ, ನೇಹಾ ರೆಡ್ಡಿ, ಧ್ರುವ ರೆಡ್ಡಿ ಹಾಗೂ ದೀಕ್ಷಿತಾ ರೆಡ್ಡಿ ತಮಗೆ ಕೊಡುತ್ತಿದ್ದ ಪಾಕೆಟ್ ಮನಿಯಿಂದ ಉಳಿಸಿದ್ದ 1.5 ಲಕ್ಷ ರೂ. ಗಳನ್ನು ಶಾಲೆಗೆ ನೀಡಿದ್ದು. ಈ ಹಣದಲ್ಲಿ ಬಣ್ಣ ಹೊಡೆಸಲಾಗಿದೆಯಲ್ಲದೆ ಟಾಯ್ಲೆಟ್ ನ್ನು ರಿಪೇರಿ ಮಾಡಲಾಗಿದೆ ಜೊತೆಗೆ ಬೆಂಚುಗಳನ್ನು ಖರೀದಿಸಲಾಗಿದೆ.

ನಿಧಿ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದವರ ಪುತ್ರನೊಬ್ಬ ತಮ್ಮ ಶಾಲೆಯ ಪರಿಸ್ಥಿತಿಯನ್ನು ವಿವರಿಸಿದ್ದು, ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ನಿಧಿ ತಮ್ಮ ಸಹೋದರ, ಸಹೋದರಿಯರಿಗೆ ಶಾಲೆಗೆ ನೆರವಾಗಲು ಮನವೊಲಿಸಿದ್ದಾರೆ. ಪ್ರತಿಷ್ಠಿತ ಶಾಲೆಯಲ್ಲಿ 4 ನೇ ತರಗತಿಯಲ್ಲಿ ಓದುತ್ತಿರುವ ದೀಕ್ಷಾ, 8 ನೇ ತರಗತಿ ಯಲ್ಲಿ ಓದುತ್ತಿರುವ ಧ್ರುವ, 10ನೇ ತರಗತಿಯ ನೇಹಾ ಇದಕ್ಕೆ ಕೈಗೂಡಿಸಿದ್ದಾರೆ. ಇವರೆಲ್ಲರೂ ತಾವು ಉಳಿಸಿದ್ದ 1.5 ಲಕ್ಷ ರೂ.ಗಳನ್ನು ದೇಣಿಗೆಯಾಗಿ ನೀಡಿ ಸರ್ಕಾರಿ ಶಾಲೆಗೆ ನೆರವಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...