alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಂಗಳೂರಿನಲ್ಲಿ ಫ್ಲೈಯಿಂಗ್ ಸ್ಕೂಲ್ ಆರಂಭಕ್ಕೆ ಚಿಂತನೆ

02hyrrr03-Take_off__620679e

ಬೆಂಗಳೂರು: ರಾಜ್ಯ ಸರಕಾರ ಬೆಂಗಳೂರು ಅಥವಾ ಬಳ್ಳಾರಿಯಲ್ಲಿ ಫ್ಲೈಯಿಂಗ್ ಸ್ಕೂಲ್ ತೆರೆಯಲು ತೀರ್ಮಾನಿಸಿದೆ. ಈ ಮೂಲಕ ರಾಜ್ಯ ಸರ್ಕಾರ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ವಿಶೇಷ ಅವಕಾಶ ಕಲ್ಪಿಸಿಕೊಡುತ್ತಿದೆ.

ಈ ಕುರಿತು ಸರ್ಕಾರ, ಈಗಾಗಲೇ ಎಚ್ಎಎಲ್ ನೊಂದಿಗೆ ಮಾತುಕತೆ ನಡೆಸಿದ್ದು, ಎಚ್ಎಎಲ್ ಒಪ್ಪಿಗೆ ಸೂಚಿಸಿದರೆ ರಾಜ್ಯ ಸರ್ಕಾರವೇ ಮುಂದಾಗಿ ವೈಮಾನಿಕ ಇಂಜಿನಿಯರಿಂಗ್ ಕೋರ್ಸ್ ತೆರೆಯಲಿದೆ. ಇದೇ ತಿಂಗಳು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, ನಾಗರಿಕ ವಿಮಾನಯಾನ ಸಚಿವರೊಂದಿಗೆ ಮಾತುಕತೆ ನಡೆಸಲಿದ್ದಾರೆ.

“ವೈಮಾನಿಕ ಇಂಜಿನಿಯರಿಂಗ್ ಕೋರ್ಸ್ ಗಾಗಿ 50 ಲಕ್ಷ ರೂ. ನೀಡಿ ಖಾಸಗಿ ಶಾಲೆಗಳಲ್ಲಿ ವ್ಯಾಸಂಗ ಮಾಡಬೇಕಾಗಿದೆ. ಗ್ರಾಮೀಣ ಹಾಗೂ ಆರ್ಥಿಕ ಮಟ್ಟದಲ್ಲಿ ಹಿಂದುಳಿದವರಿಗೆ ಈ ಕೋರ್ಸ್ ಕೈಗೆಟುಕದ ದ್ರಾಕ್ಷಿಯಾಗಿದೆ. ಹಾಗಾಗಿ ಗ್ರಾಮೀಣ ಜನತೆಗೂ ಅವಕಾಶ ಕಲ್ಪಿಸುವಂತ ಶಾಲೆಯನ್ನು ತೆರೆಯಲು ನಿರ್ಧರಿಸಿದ್ದೇವೆ” ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...