alex Certify
ಕನ್ನಡ ದುನಿಯಾ       Mobile App
       

Kannada Duniya

ಹೂವು-ಹಣ್ಣುಗಳ ಬೆಲೆ ಕೇಳಿದ್ರೇ ತಿರುಗುತ್ತೆ ತಲೆ…!

flower ni

ಬೆಂಗಳೂರು: ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಎಲ್ಲೆಡೆ ಜೋರಾಗಿದ್ದು, ಅಗತ್ಯ ವಸ್ತುಗಳ ಖರೀದಿಗೆ ಜನ ಮುಂದಾಗಿದ್ದಾರೆ. ಆದರೆ, ಮಾರುಕಟ್ಟೆಯಲ್ಲಿ ಹೂವು, ಹಣ್ಣಿನ ಬೆಲೆ ಗಗನಕ್ಕೇರಿದ್ದು, ಗ್ರಾಹಕರು ಗೊಣಗುವಂತಾಗಿದೆ.

ಬೆಂಗಳೂರಿನ ಕೆ.ಆರ್. ಮಾರುಕಟ್ಟೆ ಸೇರಿದಂತೆ ಪ್ರಮುಖ ವ್ಯಾಪಾರ ಸ್ಥಳಗಳಲ್ಲಿ ಹಬ್ಬದ ಸಾಮಾನು ಖರೀದಿಗೆ ಜನ ನೆರೆದಿದ್ದು, 2 ಬಾಳೆ ಕಂಬಕ್ಕೆ 60 ರೂ., 1 ಬಾಳೆ ಎಲೆಗೆ 5 ರೂ., ಜೋಡಿ ಕಮಲದ ಹೂವಿಗೆ 100 ರೂಪಾಯಿ ಬೆಲೆ ಇದೆ. ಇನ್ನೂ ಹೂವಿನ ಬೆಲೆಯಂತೂ ಗಗನಕ್ಕೇರಿದೆ. ಮಲ್ಲಿಗೆ ಕೆ.ಜಿ.ಗೆ 1000 ರೂ., 1 ಕೆ.ಜಿ. ಕನಕಾಂಬರ ಹೂವಿಗೆ 1,000 ರೂಪಾಯಿ ಬೆಲೆ ಇದೆ. 1 ಕಟ್ಟು ವೀಳ್ಯದೆಲೆ ಬೆಲೆ 100 ರೂ. ತಲುಪಿದೆ.

ಅದೇ ರೀತಿ ಸೇವಂತಿಗೆ 1 ಕೆ.ಜಿ.ಗೆ 800 ರೂಪಾಯಿ, ಆ್ಯಪಲ್ ಕೆ.ಜಿ.ಗೆ 200 ರೂ. ಬಾಳೆಹಣ್ಣು ಕೆ.ಜಿ.ಗೆ 100 ರೂ.ವರೆಗೆ ಮಾರಾಟ ಮಾಡಲಾಗುತ್ತಿದೆ. ಹಬ್ಬಕ್ಕೆ ಹಣ್ಣು, ಹೂವು ಸೇರಿದಂತೆ ಪೂಜಾ ಸಾಮಗ್ರಿ ಅಗತ್ಯವಾಗಿ ಬೇಕಿರುವುದರಿಂದ ಬೆಲೆ ಏರಿಕೆಯಾಗಿದ್ದರೂ, ಜನ ಗೊಣಗುತ್ತಲೇ ಖರೀದಿಯಲ್ಲಿ ತೊಡಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...