alex Certify
ಕನ್ನಡ ದುನಿಯಾ       Mobile App
       

Kannada Duniya

ಹುಂಡಿ ಹಣಕ್ಕೆ ಕೈ ಹಾಕಿದ್ದಕ್ಕೆ ವಿವರಣೆ ಕೇಳಿದ ನ್ಯಾಯಾಲಯ

ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ತೊಂದರೆಗೀಡಾದವರಿಗೆ ನೆರವಾಗಲು ರಾಜ್ಯದ ಮುಜರಾಯಿ ದೇವಾಲಯಗಳ ಹುಂಡಿ ಹಣಕ್ಕೆ ಸರ್ಕಾರ ಕೈ ಹಾಕಿದ್ದ ಕುರಿತು ಹೈಕೋರ್ಟ್ ವಿವರಣೆ ಕೇಳಿದೆ.

ಬೆಂಗಳೂರಿನ ಕಲ್ಯಾಣನಗರದ ಹೇಮಾ ನಾಯ್ಡು ಮತ್ತು ಸಾರಕ್ಕಿಯ ಡಾ. ಬಿ.ಆರ್. ಸಂಪತ್ ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ, ನ್ಯಾಯಾಧೀಶರಾದ ದಿನೇಶ್ ಮಹೇಶ್ವರಿ ಹಾಗೂ ಎಸ್.ಜಿ. ಪಂಡಿತ್ ಅವರುಗಳ ವಿಭಾಗೀಯ ಪೀಠ, ಯಾವ ಆಧಾರದ ಮೇಲೆ ಈ ಆದೇಶ ಹೊರಡಿಸಿದ್ದೀರಿ ಎಂದು ಪ್ರಶ್ನಿಸಿತ್ತಲ್ಲದೆ, ಮುಂದಿನ ವಿಚಾರಣೆ ವೇಳೆ ವಿವರಣೆ ನೀಡುವಂತೆ ಸರ್ಕಾರಿ ವಕೀಲರಿಗೆ ಸೂಚಿಸಿದೆ.

ಇತರ ಧರ್ಮದ ಪೂಜಾ ಸ್ಥಳಗಳನ್ನು ಬಿಟ್ಟು 81 ಮುಜರಾಯಿ ದೇವಾಲಯಗಳನ್ನೇ ಏಕೆ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಪ್ರಶ್ನಿಸಿದ ನ್ಯಾಯಾಧೀಶರು, ಮೇಲ್ನೋಟಕ್ಕೆ ಇದು ಸರಿಯಾದ ಕ್ರಮವೆನಿಸುತ್ತಿಲ್ಲವೆಂದು ಅಭಿಪ್ರಾಯಪಟ್ಟಿದ್ದಾರೆ. ಪ್ರಕರಣದ ಮುಂದಿನ ವಿಚಾರಣೆ ಬುಧವಾರ ನಡೆಯಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...