alex Certify
ಕನ್ನಡ ದುನಿಯಾ       Mobile App
       

Kannada Duniya

ಫ್ಲಿಪ್ ಕಾರ್ಟ್ ಆರಂಭಗೊಂಡ ಹಿನ್ನಲೆ ತೆರೆದಿಟ್ಟ ಬಿನ್ನಿ ಬನ್ಸಾಲ್

ಎರಡು ಬಾರಿ ಗೂಗಲ್ ಸಂಸ್ಥೆಯ ಹುದ್ದೆಯಿಂದ ತಿರಸ್ಕರಿಸಲ್ಪಟ್ಟು, ಕೆಲಸಕ್ಕಾಗಿ ಹಲವಾರು ಸಂಸ್ಥೆಗಳಿಗೆ ಅಲೆದಾಡಿದ ಭಾರತದ ಈ ಉದ್ಯಮಿ ಇಂದು ಸಾವಿರಾರು ಕೋಟಿ ರೂ. ಒಡೆಯ, ನೂರಾರು ಜನರಿಗೆ ಉದ್ಯೋಗ ನೀಡಿದ ಅನ್ನದಾತ. ಅವರೇ ಜನಪ್ರಿಯ ಆನ್ ಲೈನ್ ಮಾರುಕಟ್ಟೆ ಫ್ಲಿಪ್ ಕಾರ್ಟ್ ನ ಸಂಸ್ಥಾಪಕ ಬಿನ್ನಿ ಬನ್ಸಾಲ್.

ಸ್ಯಾಪ್ ಲ್ಯಾಬ್ಸ್ ಇಂಡಿಯಾ ಕಂಪನಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿರುವ ಬಿನ್ನಿ ಬನ್ಸಾಲ್, ಫ್ಲಿಪ್ ಕಾರ್ಟ್ ಸಂಸ್ಥೆ ಆರಂಭವಾದದ್ದು ಹೇಗೆ, ಅದರ ಹಿನ್ನಲೆ ಏನು, ತಾವು ಪಟ್ಟ ಪರಿಶ್ರಮ ಹೇಗಿತ್ತು ಎಂಬುದನ್ನು ಹಂಚಿಕೊಂಡಿದ್ದಾರೆ.

ಐಐಟಿ ದೆಹಲಿಯಲ್ಲಿ ಶಿಕ್ಷಣ ಪೂರೈಸಿದ ಬಿನ್ನಿ, ಸರ್ನೋಫ್ ಕಾರ್ಪ್ ಎಂಬ ಐಟಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು. 2005-06 ರಲ್ಲಿ ಗೂಗಲ್ ಸಂಸ್ಥೆಯಲ್ಲಿ ತಂತ್ರಜ್ಞಾನ ಹುದ್ದೆಗೆ ಎರಡು ಸಲ ಅರ್ಜಿ ಹಾಕಿದರೂ, ಸಂಸ್ಥೆ ಅವರ ಅರ್ಜಿಯನ್ನು ತಿರಸ್ಕರಿಸಿತ್ತು. ಬಳಿಕ ಆಮೆಜಾನ್ ನಲ್ಲಿ ಹಿರಿಯ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದ ಸ್ನೇಹಿತ ಸಚಿನ್ ಬನ್ಸಾಲ್ ಜೊತೆ ಸೇರಿ ಫ್ಲಿಪ್ ಕಾರ್ಟ್ ಆರಂಭಿಸುವ ಯೋಚನೆ ಮಾಡಿದರು. ಆಗ ಬಿನ್ನಿ ಬನ್ಸಾಲ್ ಗೆ 24 ವರ್ಷ. ರಿಸ್ಕ್ ತೆಗೆದುಕೊಂಡು ಸಂಸ್ಥೆಯನ್ನು ಆರಂಭಿಸಿಯೇ ಬಿಟ್ಟರು. ಆರಂಭದಲ್ಲಿ ನಾಲ್ಕರಿಂದ ಐದು ಲಕ್ಷ ರೂ. ಉಳಿತಾಯ ಮಾಡಿದರಂತೆ. ಅವರ ಪರಿಶ್ರಮದ ಫಲವಾಗಿ ನಂತರದಲ್ಲಿ ಫ್ಲಿಪ್ ಕಾರ್ಟ್ ಊಹೆಗೂ ಮೀರಿ ಯಶಸ್ವಿಯಾಯಿತು ಎಂದು ಹೇಳಿದ್ದಾರೆ.

ಇನ್ನೊಂದು ವಿಷಯವನ್ನು ಬಿನ್ನಿ ಹೇಳಿದ್ದಾರೆ. ಫ್ಲಿಪ್ ಕಾರ್ಟ್ ಉತ್ಪನ್ನಗಳನ್ನು ನೀಡಲು ಸ್ವತಃ ಬಿನ್ನಿ ಈಗಲೂ ಮನೆ ಮನೆ ಬಾಗಿಲಿಗೆ ಹೋಗುತ್ತಾರಂತೆ. ಕಾರಣ ಗ್ರಾಹಕರ ಮನದಿಂಗಿತ ಅರಿತುಕೊಳ್ಳುವುದು ಅವರ ಉದ್ದೇಶವಂತೆ. 12 ವರ್ಷಗಳ ಹಿಂದೆ ಉದ್ಯೋಗಕ್ಕಾಗಿ ಸಂಸ್ಥೆಗಳಿಗೆ ಅಲೆದಾಡಿದ ಯುವಕ ಇಂದು ಸಂಸ್ಥೆಯೊಂದನ್ನೇ ಹುಟ್ಟುಹಾಕಿ ಸಾವಿರಾರು ಜನರಿಗೆ ಉದ್ಯೋಗ ನೀಡಿ, ಯಶಸ್ವಿ ಉದ್ಯಮಿಯಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...