alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಳಗಾವಿಯಲ್ಲಿ ಗುಂಪು ಘರ್ಷಣೆ: ವಾಹನಗಳಿಗೆ ಬೆಂಕಿ

fire-belagavi

ಬೆಳಗಾವಿ: ಧ್ವಜ ಕಟ್ಟುವ ವಿಚಾರಕ್ಕೆ ಆರಂಭವಾದ ಜಗಳ, ಹಿಂಸಾಚಾರಕ್ಕೆ ತಿರುಗಿ, ವಾಹನಗಳಿಗೆ ಬೆಂಕಿ ಹಚ್ಚಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಧ್ವಜ ಕಟ್ಟುವ ವಿಚಾರವಾಗಿ 2 ಗುಂಪಿನವರ ನಡುವೆ ಜಗಳ ಆರಂಭವಾಗಿದ್ದು, ಅದು ವಿಕೋಪಕ್ಕೆ ತಿರುಗಿ, 10 ಬೈಕ್, 4 ಕಾರ್, 2 ವ್ಯಾನ್ ಗಳಿಗೆ ಬೆಂಕಿ ಹಚ್ಚಲಾಗಿದೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಪಾಲಿಕೆ ಸದಸ್ಯ ಸೇರಿದಂತೆ 30 ಮಂದಿಯನ್ನು ಬಂಧಿಸಲಾಗಿದೆ. ಮತ್ತೊಬ್ಬ ಪಾಲಿಕೆ ಸದಸ್ಯ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ಪಾಟೇಕರ್ ಗಲ್ಲಿ, ಕಡಕಗಲ್ಲಿ, ಕಸಾಯಿಗಲ್ಲಿಯಲ್ಲಿ ಘರ್ಷಣೆ ನಡೆದಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಸ್ಥಳದಲ್ಲಿ ಹೆಚ್ಚಿನ ಬಂದೋಬಸ್ತ್ ಕೈಗೊಳ್ಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...