alex Certify
ಕನ್ನಡ ದುನಿಯಾ       Mobile App
       

Kannada Duniya

ಮೀನನ್ನೂ ಬಿಡೋಲ್ವಲ್ಲ ಕಳ್ಳರು !

catching-fishಕೆರೆಯಲ್ಲಿದ್ದ ಮೀನುಗಳನ್ನು ಅಕ್ರಮವಾಗಿ ಕಳವು ಮಾಡಲೆತ್ನಿಸಿದ ಐವರು ಆರೋಪಿಗಳನ್ನು ಹಿಡಿದು ಥಳಿಸಿ ಬಳಿಕ ಅವರುಗಳನ್ನು ಪೊಲೀಸರಿಗೊಪ್ಪಿಸಿದ ಘಟನೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಪಾಲಕೆರೆಯಲ್ಲಿ ನಡೆದಿದೆ.

ಪಾಲಕೆರೆಯಲ್ಲಿ ಗ್ರಾಮದ ಕೆಲವರು ಬಲೆ ಹಾಕಿದ್ದು, ಬಲೆಗೆ ಬಿದ್ದ ಮೀನುಗಳನ್ನು ರಾತ್ರೋರಾತ್ರಿ ಕಳವು ಮಾಡಲು ಮುಂದಾದ ಆರೋಪಿಗಳು, ಗ್ರಾಮಸ್ಥರ ಕೈಗೆ ಸಿಕ್ಕಿ ಬಿದ್ದು ಧರ್ಮದೇಟು ತಿಂದಿದ್ದಾರೆ.

ಆರೋಪಿಗಳನ್ನು ಸಂತೋಷ್, ರಘು, ಗಂಜಾಂ ಕಿರಣ್, ದಿನೇಶ್ ಹಾಗೂ ಪುನೀತ್ ಎಂದು ಗುರುತಿಸಲಾಗಿದ್ದು, ಇವರುಗಳನ್ನು ವಶಕ್ಕೆ ಪಡೆದಿದ್ದ ಪೊಲೀಸರು, ತಹಶೀಲ್ದಾರ್ ಮುಂದೆ ಹಾಜರುಪಡಿಸಿದ ವೇಳೆ ಮುಚ್ಚಳಿಕೆ ಬರೆಸಿಕೊಂಡು ಬಿಡುಗಡೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...