alex Certify
ಕನ್ನಡ ದುನಿಯಾ       Mobile App
       

Kannada Duniya

ರಸ್ತೆ ಮೇಲೆ ಹರಿದಾಡುತ್ತಿವೆ ಮೀನುಗಳು..!

fish on road 9988ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಳೆಯ ಅಬ್ಬರಕ್ಕೆ ಜನ ತತ್ತರಿಸಿದ್ದಾರೆ. ರಸ್ತೆ ಹಾಗೂ ಮನೆಗಳಲ್ಲಿ ನೀರು ತುಂಬಿ ಹರಿಯುತ್ತಿರುವುದರಿಂದ ಜನ ಮನೆಯಿಂದ ಹೊರ ಬರಲಾರದೆ ಪರದಾಡುತ್ತಿದ್ದಾರೆ.

ಈ ಮಧ್ಯೆ ಮಡಿವಾಳ ಕೆರೆ ತುಂಬಿ ಹರಿಯುತ್ತಿರುವ ಕಾರಣ ಕೆರೆಯಲ್ಲಿದ್ದ ಮೀನುಗಳು ರಸ್ತೆ ಮೇಲೆ ಹರಿದಾಡುತ್ತಿದ್ದು, ಸಾರ್ವಜನಿಕರು ಅವುಗಳನ್ನು ಹಿಡಿದು ಚೀಲಕ್ಕೆ ತುಂಬಿಸಿಕೊಳ್ಳುತ್ತಿದ್ದಾರೆ. ಕೆಲವೆಡೆ ರಸ್ತೆಯ ಮೇಲೆ ನಾಲ್ಕೈದು ಅಡಿ ನೀರು ಹರಿಯುತ್ತಿರುವ ದೃಶ್ಯಾವಳಿಯೂ ಕಂಡು ಬರುತ್ತಿದೆ.

ಹಲವು ಬಡಾವಣೆಗಳು ನೀರಿನಿಂದ ಜಲಾವೃತವಾಗಿರುವ ಕಾರಣ ಬೋಟ್ ನಲ್ಲಿ ಧಾವಿಸಿ ಅಂತವರಿಗೆ ನೀರು, ಆಹಾರ ಸರಬರಾಜು ಮಾಡಲಾಗಿದೆ. ಕರೆಂಟ್ ಕೂಡಾ ಕೈಕೊಟ್ಟಿರುವುದರಿಂದ ಮೊಬೈಲ್ ಚಾರ್ಜ್ ಮಾಡಿಕೊಳ್ಳಲಾಗದೆ ಸಂಬಂಧಪಟ್ಟವರಿಗೆ ಕರೆ ಮಾಡಿ ತಮ್ಮ ಸಮಸ್ಯೆ ಹೇಳಿಕೊಳ್ಳಲು ಜನ ಬವಣೆಪಡುವಂತಾಗಿದೆ. ಇನ್ನೂ ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ಮಳೆಯಾಗಲಿದೆ ಎನ್ನಲಾಗುತ್ತಿದ್ದು, ಹಾಗಾದಲ್ಲಿ ಮತ್ತಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...