alex Certify
ಕನ್ನಡ ದುನಿಯಾ       Mobile App
       

Kannada Duniya

ಎಗ್ ರೋಲ್ ಗೆ ಹಣ ಕೇಳಿದ್ದಕ್ಕೆ ಕ್ಯಾಂಟೀನ್ ಯುವಕರ ಮೇಲೆ ಗುಂಡು

ಕ್ಯಾಂಟೀನ್ ನಲ್ಲಿ ಎಗ್ ರೋಲ್ ತೆಗೆದುಕೊಂಡ ಯುವಕರ ಬಳಿ ಹಣ ನೀಡುವಂತೆ ಕೇಳಿದಾಗ ಕ್ಯಾಂಟೀನ್ ಹುಡುಗರ ಮೇಲೆಯೇ ದುಷ್ಕರ್ಮಿಗಳು ಗುಂಡು ಹಾರಿಸಿದ ಘಟನೆ ಮಡಿಕೇರಿಯಲ್ಲಿ ನಡೆದಿದೆ.

ಮಡಿಕೇರಿಯ ಈ ಕ್ಯಾಂಟೀನ್ ನಲ್ಲಿ ರಾತ್ರಿ ಎಗ್ ರೋಲ್ ಪಡೆದ ಯುವಕರು ಹಣ ಕೊಡದೇ ಹೋಗುತ್ತಿದ್ದರು. ಆಗ ಕ್ಯಾಂಟೀನ್ ನೋಡಿಕೊಳ್ಳುತ್ತಿದ್ದ ರಿಯಾಜ್ ಮತ್ತು ಸಮೀಮ್ ಹಣ ಕೇಳಿದ್ದಾರೆ. ಆಗ ಆ ಯುವಕರು ಮತ್ತೆ ಗೋಬಿ ತರುವಂತೆ ಕೇಳಿದ್ದಾರೆ. ಮೊದಲು ಹಣ ನೀಡಿ ಎಂದು ಕೇಳಿದಾಗ ಕಾವೇರಿ ಬಾರ್ ಮೇಲ್ಭಾಗದ ಕಿಟಕಿಯಿಂದ ಮೂರು ಬಾರಿ ಗುಂಡು ಹಾರಿಸಲಾಗಿದೆ.

ಈ ಘಟನೆಯಿಂದ ಕ್ಯಾಂಟೀನ್ ನಡೆಸುತ್ತಿದ್ದ ರಿಯಾಜ್ ಮತ್ತು ಸಮೀಮ್ ಗಾಯಗೊಂಡಿದ್ದಾರೆ. ರಿಯಾಜ್ ತೊಡೆ ಭಾಗಕ್ಕೆ ಹಾಗೂ ಸಮೀಮ್ ಕಾಲಿಗೆ ಗಾಯಗಳಾಗಿದ್ದು, ಇಬ್ಬರನ್ನೂ ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಮಡಿಕೇರಿ ನಗರ ಪೊಲೀಸರು ಒಬ್ಬನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...