alex Certify
ಕನ್ನಡ ದುನಿಯಾ       Mobile App
       

Kannada Duniya

ಅಂಗಡಿಗೆ ಬೆಂಕಿ ಬಿದ್ದ ಪ್ರಕರಣಕ್ಕೆ ಹೊಸ ತಿರುವು

fire benಬೆಂಗಳೂರಿನ ಚಿಕ್ಕಪೇಟೆಯ ಮಾಯಾ ಎಲೆಕ್ಟ್ರಿಕಲ್ಸ್ ಅಂಗಡಿಗೆ ಬೆಂಕಿ ಬಿದ್ದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಅಂಗಡಿ ಮಾಲೀಕನೇ ಇನ್ಶೂರೆನ್ಸ್ ಹಣಕ್ಕಾಗಿ ತನ್ನ ಅಂಗಡಿಗೆ ಬೆಂಕಿ ಹಚ್ಚಿಸಿರುವುದು ಬಹಿರಂಗವಾಗಿದೆ.

ಅಂಗಡಿ ಮಾಲೀಕ ನರೇಂದ್ರ ಲಾಲ್ ಚೌಧರಿ ತನ್ನ ಸ್ನೇಹಿತ, ವೃತ್ತಿಯಲ್ಲಿ ಕಾರು ಚಾಲಕನಾಗಿದ್ದ ಮಂಡ್ಯ ಜಿಲ್ಲೆಯ ಗಜೇಂದ್ರ ಹಾಗೂ ಅರುಣ್ ಕುಮಾರ್ ಎಂಬವರ ಸಹಕಾರದೊಂದಿಗೆ ಅಂಗಡಿಗೆ ಬೆಂಕಿ ಹಚ್ಚಿಸಲು ಪ್ಲಾನ್ ಮಾಡಿದ್ದ. ಇದು ಆಕಸ್ಮಿಕ ಘಟನೆಯೆಂಬಂತೆ ಬಿಂಬಿಸಲು ಖತರ್ನಾಕ್ ಐಡಿಯಾ ಮಾಡಿದ್ದನೆನ್ನಲಾಗಿದೆ.

ಅದರಂತೆ ಗಜೇಂದ್ರ ಹಾಗೂ ಅರುಣ್ ಕುಮಾರ್ ಯುಪಿಎಸ್ ಬ್ಯಾಟರಿ ರಾಂಗ್ ಕನೆಕ್ಷನ್ ಕೊಟ್ಟಿದ್ದು, ಶಾರ್ಟ್ ಸರ್ಕಿಟ್ ಆಗಿ ಯುಪಿಎಸ್ ಬ್ಲಾಸ್ಟ್ ಆದ ಕಾರಣ ಕ್ಷಣಾರ್ಧದಲ್ಲಿ ಬೆಂಕಿ ವ್ಯಾಪಿಸಿ ಗಜೇಂದ್ರ ಜೀವಂತವಾಗಿ ದಹನವಾಗಿದ್ದ. ಅರುಣ್ ಕುಮಾರ್ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ಇದೀಗ ಪೊಲೀಸರು ಅಂಗಡಿ ಮಾಲೀಕ ನರೇಂದ್ರ ಲಾಲ್ ಚೌಧರಿಯನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...