alex Certify
ಕನ್ನಡ ದುನಿಯಾ       Mobile App
       

Kannada Duniya

ಪೆಟ್ರೋಲ್ ಸೋರಿಕೆಯಿಂದ ಬೆಂಕಿ; ತಪ್ಪಿತು ಭಾರಿ ದುರಂತ

IMG_1309

ಸಾವಿರಾರು ಲೀಟರ್ ಪೆಟ್ರೋಲ್ ಸೋರಿಕೆಯಾಗಿ ಬೆಂಕಿ ಹತ್ತಿಕೊಂಡ ಪ್ರಕರಣ ಇಂದು ಬೆಳಿಗ್ಗೆ ಶಿವಮೊಗ್ಗ ನಗರದ ದ್ರೌಪದಮ್ಮ ಸರ್ಕಲ್ ಬಳಿ ಇರುವ ಶ್ರೀ ರಾಘವೇಂದ್ರ ಫ್ಯೂಯಲ್ಸ್ ನಲ್ಲಿ ನಡೆದಿದ್ದು, ಅದೃಷ್ಟವಶಾತ್ ಸಂಭವಿಸಬಹುದಾಗಿದ್ದ ಭಾರೀ ದುರಂತ ತಪ್ಪಿದೆ.

ಪೆಟ್ರೋಲ್ ಬಂಕ್ ನಲ್ಲಿ ಟ್ಯಾಂಕ್ ಒಂದರ ಕಾಮಗಾರಿ ಇತ್ತೀಚೆಗೆ ನಡೆದಿದ್ದು, ಅದು ಕಳಪೆಯಾಗಿತ್ತು ಎಂದು ಹೇಳಲಾಗಿದೆ. ಈ ಕಾರಣದಿಂದ ಪೆಟ್ರೋಲ್ ಪೈಪ್ ಲೀಕೇಜ್ ಆಗಿ ಬಂಕ್ ನ ಹಿಂದಿರುವ ಚರಂಡಿಗೆ ಪೆಟ್ರೋಲ್ ಹರಿದುಹೋಗಿದೆ. ಸುಮಾರು 100 ಅಡಿ ದೂರದ ಜಾಗದಲ್ಲಿ ಬೆಂಕಿ ಹತ್ತಿಕೊಂಡಿದೆ.

ಇದ್ದಕ್ಕಿದ್ದಂತೆ ಬೆಂಕಿ ಹತ್ತಿಕೊಂಡಿದ್ದರಿಂದ ಸಾರ್ವಜನಿಕರು ಭಯಭೀತರಾಗಿದ್ದಾರೆ. ವಿಷಯ ಗೊತ್ತಾಗುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಆಗಮಿಸಿ ಬೆಂಕಿಯನ್ನು ನಂದಿಸಿ ಅದು ಹೆಚ್ಚು ವಿಸ್ತಾರವಾಗದಂತೆ ನೋಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಸಾರ್ವಜನಿಕರು ಕೂಡ ಬೆಂಕಿ ನಂದಿಸುವ ಕಾರ್ಯದಲ್ಲಿ ಸಹಕಾರ ನೀಡಿದ್ದರಿಂದ ಬೆಂಕಿಯು ಮತ್ತೆ ಹಿಮ್ಮುಖವಾಗಿ ಚರಂಡಿ ಮೂಲಕ ಬಂಕ್ ನತ್ತ ಧಾವಿಸದೇ 100 ಅಡಿ ದೂರದಲ್ಲೇ ನಂದಿ ಹೋಗಿದ್ದು, ಇದರಿಂದ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ.

ಬೆಂಕಿ ಹತ್ತಿದಾಗ ಇಬ್ಬರು ಮಕ್ಕಳು ಅದರ ಬಳಿ ಇದ್ದು, ಅವರಿಗೆ ಸಣ್ಣಪುಟ್ಟ ಗಾಯಗಳಾಗಿದೆ ಎಂದು ತಿಳಿದುಬಂದಿದೆ. ಬೆಂಕಿ ಹತ್ತಿದ ತಕ್ಷಣ ಸುತ್ತಮುತ್ತಲಿನ ಪ್ರದೇಶದ ನಿವಾಸಿಗಳು ಭಯಭೀತರಾಗಿ ಆತಂಕದಿಂದ ಮನೆಯಿಂದ ಹೊರಬಂದರು. ತಮ್ಮ ಮನೆಗಳಲ್ಲಿ ಇರುವ ಗ್ಯಾಸ್ ಸಿಲಿಂಡರ್ ಗಳನ್ನು ತಕ್ಷಣವೇ ಬಂದ್ ಮಾಡಿ ಬಾಗಿಲು ಹಾಕಿಕೊಂಡು ಹೊರ ನಡೆದರು. ಅಕ್ಕಪಕ್ಕ ಶಾಲೆಗಳಿದ್ದು ಉರ್ದು ಶಾಲೆ ತೀರ ಹತ್ತಿರವಿದ್ದುದ್ದರಿಂದ ತಕ್ಷಣವೇ ರಜೆ ಘೋಷಿಸಿ ಮಕ್ಕಳನ್ನು ಮನೆಗೆ ಕಳುಹಿಸಲಾಯಿತು. ಒಂದು ಕ್ಷಣ ಏನೂ ನಡೆಯುತ್ತಿದೆ ಎಂದು ತಿಳಿಯದೇ ಜನರು ಭಯಭೀತರಾಗಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...