alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಊರಲ್ಲಿ ಅಡುಗೆ ಮಾಡಿದ್ರೇ 501 ರೂ. ದಂಡ

Turmeric

ಧಾರವಾಡ: ಊರೆಂದ ಮೇಲೆ ಮನೆಯಲ್ಲಿ ಅಡುಗೆ ಮಾಡುವುದು ಸಾಮಾನ್ಯ ಸಂಗತಿ. ಆದರೆ, ಈ ಊರಿನಲ್ಲಿ ಯಾರಾದರೂ ಮನೆಯಲ್ಲಿ ಅಡುಗೆ ಮಾಡಿದರೆ 501 ರೂಪಾಯಿ ದಂಡ ಕಟ್ಟಬೇಕು. ಅರೇ ಇದೇನಿದು ಎಂಬ ಕುತೂಹಲವೇ ಹಾಗಾದರೆ ಮುಂದೆ ಓದಿ.

ಧಾರವಾಡ ಸಮೀಪದ ಗೋವನಕೊಪ್ಪ ಗ್ರಾಮದಲ್ಲಿ ಮನೆಯಲ್ಲಿ ಅಡುಗೆ ಮಾಡಿದರೆ ಹಾಗೂ ಯಾರಾದರೂ ಚಪ್ಪಲಿ ಧರಿಸಿದರೆ 501 ರೂಪಾಯಿ ದಂಡ ಕಟ್ಟಬೇಕಿದೆ. ಈ ಊರಿನಲ್ಲಿ ಪ್ರತಿ 45 ವರ್ಷಗಳಿಗೊಮ್ಮೆ ಜಾತ್ರೆ ನಡೆಯುತ್ತದೆ. ಜಾತ್ರೆಯ ಹಿನ್ನೆಲೆಯಲ್ಲಿ ಇಂತಹ ನಿಯಮ ಜಾರಿಗೆ ತರಲಾಗಿದೆ. 5 ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ಊರಿನವರೆಲ್ಲಾ ಒಟ್ಟಿಗೆ ಒಂದು ಕಡೆ ಸೇರಿ ಅಡುಗೆ ಮಾಡಿ ಊಟ ಮಾಡುತ್ತಾರೆ. ಅದೇ ಈ ಜಾತ್ರೆಯ ವಿಶೇಷ.

ಮತ್ತೊಂದು ಪ್ರಮುಖ ಸಂಗತಿ ಎಂದರೆ, ಗ್ರಾಮದ ಎಲ್ಲಾ ಜನರು ಒಟ್ಟಿಗೆ ಹಳದಿ ಭಂಡಾರ ಎರಚಿಕೊಂಡು ಸಂಭ್ರಮಿಸುತ್ತಾರೆ. ಪುರುಷರು, ಮಹಿಳೆಯರು ಮಕ್ಕಳು ಎಲ್ಲಾ ಒಟ್ಟಿಗೆ ಸೇರಿ ಹಬ್ಬ ಆಚರಿಸುವುದೇ ಈ ಜಾತ್ರೆಯ ಮತ್ತೊಂದು ವಿಶೇಷವಾಗಿದೆ.

ಹಿಂದಿನಿಂದಲೂ ಈ ಆಚರಣೆ ನಡೆಸಿಕೊಂಡು ಬರಲಾಗುತ್ತಿದೆ ಎಂದು ಗ್ರಾಮದ ಹಿರಿಯರು ಹೇಳುತ್ತಾರೆ. ಎಲ್ಲರೂ ಒಂದೇ ಕಡೆ ಅಡುಗೆ ಮಾಡಿ ಊಟ ಮಾಡುವ, ಪರಸ್ಪರ ಅರಿಶಿಣ ಎರಚಿಕೊಂಡು ಸಂಭ್ರಮಿಸುವ ಗೋವನಕೊಪ್ಪದ ದ್ಯಾಮವ್ವ, ದುರ್ಗಮ್ಮ ದೇವಿ ಜಾತ್ರೆಗೆ ಸುತ್ತಲಿನ ಗ್ರಾಮಸ್ಥರು ಕೂಡ ಬರುತ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...