alex Certify
ಕನ್ನಡ ದುನಿಯಾ       Mobile App
       

Kannada Duniya

ದೇವರ ಜಾತ್ರೆಯಲ್ಲೇ ನಡೀತು ಅರೆ ಬೆತ್ತಲೆ ನೃತ್ಯ

dance

ಹಾಸನ: ಜಾತ್ರೆ ಎಂದ ಮೇಲೆ ಜನ ಸೇರುತ್ತಾರೆ. ಜನ ಸೇರುವ ಜಾಗದಲ್ಲಿ ಸಡಗರ ಸಂಭ್ರಮಗಳಿಗೇನು ಕೊರತೆ ಇರಲ್ಲ. ಆದರೆ, ದೇವರ ಉತ್ಸವ ಜಾತ್ರೆಗಳಲ್ಲಿ ಭಕ್ತಿ, ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂಬುದು ಸಾಮಾನ್ಯ ಅನಿಸಿಕೆಯಾಗಿರುತ್ತದೆ.

ದೇವರ ಜಾತ್ರೆಯಲ್ಲೇ ಡ್ಯಾನ್ಸರ್ ಗಳನ್ನು ಕರೆಸಿ ಅರೆಬೆತ್ತಲೆ ನೃತ್ಯ ಪ್ರದರ್ಶಿಸಿದ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ. ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಹಳ್ಳಿಯೊಂದರಲ್ಲಿ ಗ್ರಾಮ ದೇವರ ಉತ್ಸವದಲ್ಲಿ ಅರೆಬೆತ್ತಲೆ ನೃತ್ಯ ಪ್ರದರ್ಶಿಸಲಾಗಿದೆ ಎಂದು ಹೇಳಲಾಗಿದೆ.

ಉತ್ಸವಕ್ಕೆ ಸ್ಥಳೀಯ ಶಾಸಕರು ಕೂಡ ಆಗಮಿಸಿದ್ದು, ಅವರು ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿ, ಹೊರಟು ಹೋದ ನಂತರ, ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಗಿದೆ. ಈ ಕಾರ್ಯಕ್ರಮದಲ್ಲಿ ಕೆಲವು ಯುವತಿಯರಿಂದ ಅರೆಬೆತ್ತಲೆ ನೃತ್ಯ ನಡೆದಿದ್ದು, ಕೆಲವರು ಸಂತಸ ವ್ಯಕ್ತಪಡಿಸಿದರೆ, ಮತ್ತೆ ಕೆಲವರು ಆಕ್ಷೇಪಿಸಿದ್ದಾರೆ ಎನ್ನಲಾಗಿದೆ. ದೇವರ ಜಾತ್ರೆಯಲ್ಲಿ ಇಂತಹ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು ಸರಿಯಲ್ಲ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...