alex Certify
ಕನ್ನಡ ದುನಿಯಾ       Mobile App
       

Kannada Duniya

ಕಲರ್ ಫುಲ್ ಆಗಿರಲಿ ಹೋಳಿ ಆಚರಣೆ

banna-holi

ಹೋಳಿ ಹಬ್ಬ ಎಂದ ಕೂಡಲೇ ನೆನಪಾಗುವುದು ಬಣ್ಣ. ರಂಗು ರಂಗಿನ ಹೋಳಿ ಆಚರಣೆಯೇ ಮನಸ್ಸಿಗೆ ಸಂತಸ ಕೊಡುತ್ತದೆ.

ಕಲರ್ ಫುಲ್ ಹಬ್ಬದ ಸಂಭ್ರಮಕ್ಕೆ ಹೆಚ್ಚಿನವರು ಕಾಯುತ್ತಿರುತ್ತಾರೆ. ದೇಶಾದ್ಯಂತ ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ.

ಸಾಮಾನ್ಯವಾಗಿ ಎಲ್ಲಾ ಹಬ್ಬಗಳಿಗೊಂದು ಹಿನ್ನಲೆ ಇರುವಂತೆಯೇ ಹೋಳಿ ಹಬ್ಬಕ್ಕೂ ತನ್ನದೇ ಆದ ಹಿನ್ನಲೆ ಇದೆ.

ಕಾಮದಹನ, ಎತ್ತರದಲ್ಲಿ ಮಡಿಕೆ ಕಟ್ಟಿ ಒಡೆಯುವುದು, ಬಣ್ಣ ಎರಚುವುದು ಇವೇ ಮೊದಲಾದವುಗಳನ್ನು ಹೋಳಿ ಹಬ್ಬದಲ್ಲಿ ಕಾಣಬಹುದಾಗಿದೆ.

ಯುವಕರು, ಯುವತಿಯರಿಗಂತೂ ಹೋಳಿ ಹಬ್ಬದ ಸಂಭ್ರಮ ಹೇಳತೀರದಾಗಿರುತ್ತದೆ. ಕೆಲವು ಏರಿಯಾಗಳಲ್ಲಿ ಯುವಕರು ಗುಂಪುಗೂಡಿ ಹೋಳಿ ಆಚರಿಸಿದರೆ, ಮತ್ತೆ ಕೆಲವು ಕಾಲೇಜ್ ವಿದ್ಯಾರ್ಥಿಗಳು ಹಬ್ಬವನ್ನು ‘ಕಲರ್ ಫುಲ್’ ಆಗಿ ಆಚರಿಸುತ್ತಾರೆ.

ಚಿಕ್ಕವರಿಂದ ಹಿಡಿದು ದೊಡ್ಡವರವರೆಗೆ ಒಂದಾಗಿ ಬಣ್ಣದಲ್ಲಿ ಮಿಂದು ಸಂಭ್ರಮಿಸುವುದನ್ನು ನೋಡುವುದೇ ಕಣ್ಣಿಗೆ ಹಬ್ಬವಿದ್ದಂತೆ.

ದೇಶಾದ್ಯಂತ ಪ್ರಾದೇಶಿಕತೆಗೆ ಅನುಗುಣವಾಗಿ ಹೋಳಿ ಆಚರಣೆಯನ್ನು ಕಾಣಬಹುದಾಗಿದೆ. ಸ್ನೇಹಿತರಿಗೆ ಬಂಧುಗಳಿಗೆ ಬಣ್ಣ ಹಚ್ಚುವ ಮೂಲಕ ಶುಭಾಶಯ ವಿನಿಮಯ ಮಾಡಿಕೊಳ್ಳಲಾಗುತ್ತದೆ. ಎಲ್ಲರೂ ಗುಂಪಾಗಿ ಸೇರುವುದರಿಂದ ಸಂಭ್ರಮ ಹೆಚ್ಚಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...