alex Certify
ಕನ್ನಡ ದುನಿಯಾ       Mobile App
       

Kannada Duniya

ದೇವಸ್ಥಾನಕ್ಕೆ ಬಂದವರು ಕೆರೆಗೆ ಬಲಿಯಾದ್ರು

ಕೊಪ್ಪಳದ ಗಂಗಾವತಿಯ ಕೆರೆಯೊಂದರಲ್ಲಿ ಐವರು ಜಲಸಮಾಧಿಯಾದ ಘಟನೆ ನಡೆದಿದೆ. ಇಲ್ಲಿನ ಹೇಮಗುಡ್ಡದ ಕೆರೆಯಲ್ಲಿ ಈಜಲು ಹೋದ ಐದು ಮಂದಿ ಹೆಣವಾಗಿದ್ದಾರೆ. ಮೃತರೆಲ್ಲ ಹೈದ್ರಾಬಾದ್ ಮೂಲದವರು ಎನ್ನಲಾಗಿದೆ.

ರಾಘವೇಂದ್ರ, ಪವಿತ್ರಾ, ಪಾವನಿ, ಆಶಿಷ್ ಹಾಗೂ ಪೌರ್ಣಿಕಾ ಮೃತ ದುರ್ದೈವಿಗಳು. ಇಲ್ಲಿನ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಬಂದಿದ್ದ ಐವರು ಈಜಲು ಹೇಮಗುಡ್ಡ ಕೆರೆಗೆ ಹೋಗಿದ್ದರು ಎನ್ನಲಾಗಿದೆ. ಕೆರೆಯ ಆಳದ ಬಗ್ಗೆ ಮೃತರಿಗೆ ಸರಿಯಾದ ಮಾಹಿತಿಯಿರಲಿಲ್ಲ. ಹಾಗಾಗಿ ಈ ಅವಘಡ ನಡೆದಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳೀಯರು ಕೆರೆಯಿಂದ ಐವರ ಮೃತದೇಹವನ್ನು ಹೊರಗೆ ತೆಗೆದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...