alex Certify
ಕನ್ನಡ ದುನಿಯಾ       Mobile App
       

Kannada Duniya

ಬಂಡಾಯದ ನೆಲ ನರಗುಂದದಲ್ಲಿ ರೈತ ಹುತಾತ್ಮ ದಿನ ಆಚರಣೆ

1980 ರ ಜುಲೈ 21 ರಂದು ನರಗುಂದದಲ್ಲಿ ಸರ್ಕಾರದ ವಿರುದ್ಧ ರೈತರ ಬ್ರಹತ್ ಪ್ರತಿಭಟನೆ ನಡೆದು ಇಂದಿಗೆ 38 ವರ್ಷಗಳಾಗಿವೆ. ರೈತರ ಹೋರಾಟಕ್ಕೆ ಅಂದಿನ ಆರ್.ಆರ್. ಗುಂಡೂರಾವ್ ನೇತೃತ್ವದ ರಾಜ್ಯ ಸರ್ಕಾರ  ತತ್ತರಿಸಿ ಹೋಗಿತ್ತು.

ಸಕಾಲಕ್ಕೆ ಕಾಲುವೆಗಳ ಮೂಲಕ ಜಮೀನಿಗೆ ನೀರು ಸಿಗದ ಕಾರಣ ಅವತ್ತಿನ ದಿನ ಸರ್ಕಾರ ವಿಧಿಸುತಿದ್ದ ಅಭಿವೃದ್ದಿ ಕರ ರದ್ದುಪಡಿಸಬೇಕೆಂದು ರೈತರು ತಹಶೀಲ್ದಾರ್ ಕಛೇರಿಗೆ ತೆರಳಿ ಕಛೇರಿ ಮುಚ್ಚಲು ಆಗ್ರಹಿಸಿದ್ದು, ತಹಶೀಲ್ದಾರ್ ಅವರು ಮೇಲಾಧಿಕಾರಿಗಳಿಂದ ಯಾವುದೆ ಆಜ್ಞೆ ಬಂದಿಲ್ಲ. ಅದಕ್ಕೆ ಕಛೇರಿ ಮುಚ್ಚಲು ಆಗುವುದಿಲ್ಲವೆಂದು ಹೇಳಿದ್ದಕ್ಕೆ ಕೋಪಗೊಂಡ ರೈತರು ಕಛೇರಿ ಮೇಲೆ ಕಲ್ಲು ತೂರಾಟ ನಡೆಸಿದ್ದರು.

ಹೋರಾಟ ತೀವ್ರಗೊಂಡಾಗ ಪೊಲೀಸರು ಗೋಲಿಬಾರ್ ನಡೆಸಿದ ಪರಿಣಾಮ ಪ್ರತಿಭಟನೆಯಲ್ಲಿ ಭಾಗವಹಿಸಿದ ಚಿಕ್ಕ ನರಗುಂದದ ರೈತ ವೀರಪ್ಪ ಅವರ ಎದೆಗೆ ಗುಂಡು ತಗುಲಿ ಅವರು ಸ್ಥಳದಲ್ಲೇ ಮೃತಪಟ್ಟರು. ಆಗ ಅದನ್ನು ಕಂಡ ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಈ ಹೋರಾಟಕ್ಕಿಂದು 38 ವರ್ಷಗಳ ಸಂದಿದ್ದು, ಇಷ್ಟು ವರ್ಷಗಳು ಕಳೆದರೂ ರೈತರ ಬಾಳು ಮಾತ್ರ ಹಸನಾಗಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...