alex Certify
ಕನ್ನಡ ದುನಿಯಾ       Mobile App
       

Kannada Duniya

ಸಕತ್ತಾಗಿದೆ ಬೆಳೆ ರಕ್ಷಿಸಲು ರೈತರು ಮಾಡಿರುವ ಈ ಪ್ಲಾನ್

ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಈಗ ಬೆದರು ಬೊಂಬೆಗಳಾಗಿಬಿಟ್ಟಿದ್ದಾರೆ. ರೈತರ ಹೊಲಗದ್ದೆಗಳಲ್ಲಿನ ಬೆಳೆಯನ್ನ ಪ್ರಾಣಿ, ಪಕ್ಷಿಗಳು ಹಾಳು ಮಾಡದಂತೆ ಕಾವಲಾಗಿದ್ದಾರೆ.

ಯಡಿಯೂರಪ್ಪನವರಿಗೂ ಇದೇ ಪರಿಸ್ಥಿತಿ ಸೃಷ್ಟಿಯಾಗಿದೆ. ಇದೇನಪ್ಪಾ ಮೋದಿ, ಅಮಿತ್ ಷಾ ಮತ್ತು ಯಡಿಯೂರಪ್ಪನವರಿಗೆ ಇಂತಾ ಗತಿ ಯಾಕೆ ಬಂತು ಅಂತ ಯೋಚನೆ ಮಾಡ್ತಿದ್ದೀರಾ…?

ವಿಧಾನಸಭೆ ಚುನಾವಣೆಯ ಬೃಹತ್ ರ್ಯಾಲಿಗಳು ಮುಗಿದ ಬಳಿಕ ಮೋದಿ, ಅಮಿತ್ ಷಾ ಮತ್ತು ಯಡಿಯೂರಪ್ಪನವರ ಬೃಹತ್ ಕಟೌಟ್ ಗಳನ್ನ ರೈತರು ತೆಗೆದುಕೊಂಡು ಹೋಗಿ ಹೊಲ, ಗದ್ದೆಗಳಲ್ಲಿ ನೆಟ್ಟಿದ್ದಾರೆ.

ಸಾಮಾನ್ಯವಾಗಿ ಪ್ರಾಣಿ ಪಕ್ಷಿಗಳು ಹಾಳು ಮಾಡುವ ಕಾರಣಕ್ಕೆ ಬೆದರು ಬೊಂಬೆಗಳನ್ನ ರೈತರು ಹೊಲಗದ್ದೆಗಳಲ್ಲಿ ಇಡ್ತಾರೆ. ಅದೇ ರೀತಿಯಲ್ಲಿ ಈಗ ಕರ್ನಾಟದ ಜಿಲ್ಲೆಯೊಂದರಲ್ಲಿ ರೈತರು ಮೋದಿ, ಅಮಿತ್ ಷಾ ಮತ್ತು ಯಡಿಯೂರಪ್ಪನವರನ್ನ ಬೆಚ್ಚಪ್ಪಗಳನ್ನಾಗಿ ಮಾಡಿ ನಿಲ್ಲಿಸಿದ್ದಾರೆ.

ರಾಜ್ಯದಲ್ಲಿ ಈ ಬಾರಿ ಉತ್ತಮ ಮಳೆಯಾಗಿದೆ. ಬೆಳೆದ ಬೆಳೆಗಳು ಪಕ್ಷಿಗಳ ಪಾಲಾಗದಂತೆ ತಡೆಯೋಕೆ ರೈತರು ರಾಜಕೀಯ ನಾಯಕರ ಕಟೌಟ್ ಗಳನ್ನೇ ಈ ರೀತಿ ಕಾವಲಿಗೆ ನಿಲ್ಲಿಸಿರೋ ಘಟನೆ ಎಲ್ಲರಿಗೂ ಅಚ್ಚರಿಯನ್ನುಂಟು ಮಾಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...