alex Certify
ಕನ್ನಡ ದುನಿಯಾ       Mobile App
       

Kannada Duniya

ರೈತರ ಸಾಲ ಮನ್ನಾ ಕುರಿತ ಗೊಂದಲಗಳಿಗೆ ಬೀಳುತ್ತಾ ತೆರೆ?

ಜೆಡಿಎಸ್-ಕಾಂಗ್ರೆಸ್ ಮೈತ್ರಿ ಕೂಟ ಸರ್ಕಾರದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮಿತ್ರ ಪಕ್ಷ ಕಾಂಗ್ರೆಸ್ ನ ಕೆಲ ನಾಯಕರ ವಿರೋಧದ ಮಧ್ಯೆಯೂ ಬಜೆಟ್ ನಲ್ಲಿ ರಾಜ್ಯದ ರೈತರ ಸಾಲ ಮನ್ನಾ ಘೋಷಣೆ ಮಾಡಿದ್ದರು.

ಇದರಿಂದಾಗಿ ರೈತ ಸಮೂಹದಲ್ಲಿ ಹರ್ಷ ಮೂಡಿತಾದರೂ ಸಾಲ ಮನ್ನಾ ಕುರಿತಂತೆ ಇನ್ನೂ ಕೆಲ ಗೊಂದಲಗಳು ಮುಂದುವರೆದಿರುವ ಕಾರಣ ಸಹಜವಾಗಿಯೇ ಸರ್ಕಾರದ ಮುಂದಿನ ನಡೆಯನ್ನು ಎದುರು ನೋಡುತ್ತಿದ್ದಾರೆ.

ಈ ಮೊದಲು ರೈತ ಕುಟುಂಬದಲ್ಲಿ ಎಷ್ಟೇ ಮಂದಿ ಸಾಲ ಪಡೆದಿದ್ದರೂ ಅದನ್ನು ಮನ್ನಾ ಮಾಡುವುದಾಗಿ ಹೇಳಲಾಗಿತ್ತಾದರೂ ಬಳಿಕ ಆದೇಶವನ್ನು ಮಾರ್ಪಡಿಸಿ ಕುಟುಂಬದಲ್ಲಿ ಒಬ್ಬ ಸದಸ್ಯರ ಸಾಲ ಮಾತ್ರ ಮನ್ನಾ ಮಾಡಲಾಗುತ್ತದೆ ಎಂಬ ಆದೇಶ ಹೊರಡಿಸಲಾಗಿತ್ತು.

ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾದ ಬಳಿಕ ಇದೀಗ ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ, ಸಹಕಾರ ಸಂಘಗಳಲ್ಲಿ ರೈತ ಕುಟುಂಬದ ಎಷ್ಟೇ ಮಂದಿ ಸಾಲ ಪಡೆದಿದ್ದರು ಅದನ್ನು ಮನ್ನಾ ಮಾಡಲಾಗುತ್ತದೆ. ಈ ಕುರಿತ ಪರಿಷ್ಕೃತ ಆದೇಶ ಹೊರಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ರಾಜ್ಯ ಸರ್ಕಾರ ಈಗಾಗಲೇ ಸಹಕಾರ ಬ್ಯಾಂಕ್ ಗಳಲ್ಲಿನ ರೈತರ ಸಾಲ ಮನ್ನಾ ಮಾಡಲು ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿದ್ದು, ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿನ ಸಾಲದ ಕುರಿತು ಆದೇಶ ಹೊರಬೀಳಬೇಕಿದೆ. ಇದರ ಮಧ್ಯೆ ಕೆಲ ಬ್ಯಾಂಕ್ ಗಳು ರೈತರ ಮೇಲೆ ಸಾಲ ವಸೂಲಾತಿಗೆ ಒತ್ತಡ ಹೇರುತ್ತಿದ್ದು, ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಶೀಘ್ರದಲ್ಲೇ ರಾಷ್ಟ್ರೀಕೃತ ಬ್ಯಾಂಕ್ ಸಾಲ ಕುರಿತು ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ. ಈ ಎಲ್ಲ ಗೊಂದಲಗಳಿಗೆ ಸರ್ಕಾರದ ಆದೇಶದ ಬಳಿಕ ತೆರೆ ಬೀಳುವ ನಿರೀಕ್ಷೆಯಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...