alex Certify
ಕನ್ನಡ ದುನಿಯಾ       Mobile App
       

Kannada Duniya

ಕಟ್ಟಿದ ‘ವಿಮೆ’ಗೆ ಸಿಕ್ಕ ‘ಪರಿಹಾರ’ವೆಷ್ಟು ಗೊತ್ತಾ…?

ರಾಜ್ಯದಲ್ಲಿನ ಬರ ಪರಿಸ್ಥಿತಿಯ ಅಧ್ಯಯನಕ್ಕಾಗಿ ಕೇಂದ್ರ ತಂಡ ಆಗಮಿಸಿದ್ದು, ಈ ತಂಡ ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಮಹದೇವಪುರಕ್ಕೆ ಭೇಟಿ ನೀಡಿದ ವೇಳೆ ರೈತರು ಕೇಳಿದ ಪ್ರಶ್ನೆಯಿಂದಾಗಿ ಅಧಿಕಾರಿಗಳು ಕಕ್ಕಾಬಿಕ್ಕಿಯಾಗಿದ್ದಾರೆ.

‘ಪ್ರಧಾನ ಮಂತ್ರಿ ಫಸಲ್ ಬಿಮಾ’ ಯೋಜನೆ ಕುರಿತು ಅಧಿಕಾರಿಗಳ ಮುಂದೆ ತಮ್ಮ ಅಳಲು ತೋಡಿಕೊಂಡ ಶರಣೇ ಗೌಡ ಎಂಬ ರೈತರು, ಬೆಳೆ ವಿಮೆಗಾಗಿ 350 ರೂ. ಕಟ್ಟಲಾಗಿದೆ. ಆದರೆ ಪರಿಹಾರವಾಗಿ 2 ರೂ. ಚೆಕ್ ಬಂದಿದೆ. ಇದರಿಂದ ರೈತರು ಬದುಕಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.

ಇದಕ್ಕೆ ಮತ್ತಷ್ಟು ರೈತರು ಧ್ವನಿಗೂಡಿಸಿದ್ದು, ತಾವುಗಳು ಪ್ರತಿವರ್ಷವೂ ‘ಪ್ರಧಾನ ಮಂತ್ರಿ ಫಸಲ್ ಬಿಮಾ’ ಯೋಜನೆ ಕಂತು ಕಟ್ಟುತ್ತಿದ್ದೇವೆ. 2017-18 ನೇ ಸಾಲಿನಲ್ಲಿ ಎಕರೆಗೆ 2 ರೂ., 3 ರೂ. ಪರಿಹಾರ ಜಮೆಯಾಗಿದೆ ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...