alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿಯ ಮೂರ್ತಿಗೆ ಪತಿಯ ಪೂಜೆ, ಈ ವಿಶಿಷ್ಟ ಪ್ರೇಮ ದೇವಾಲಯ ಎಲ್ಲಿದೆ ಗೊತ್ತಾ?

ಚಾಮರಾಜನಗರದ ಕೃಷ್ಣಾಪುರ ಗ್ರಾಮದಲ್ಲಿ ವ್ಯಕ್ತಿಯೊಬ್ಬ ಪತ್ನಿಗಾಗಿ ದೇವಾಲಯ ಕಟ್ಟಿ ಅವಳನ್ನೇ ಪೂಜಿಸುತ್ತಿದ್ದಾನೆ. ಇನ್ನೂ ದೇವಾಲಯದ ಕಟ್ಟಡ ಕಾಮಗಾರಿ ಮುಗಿದಿಲ್ಲ. ಆದ್ರೆ ಪತ್ನಿ ರಾಜಮ್ಮಳ ಮೂರ್ತಿಯನ್ನು ಪ್ರತಿಷ್ಠಾಪಿಸಿ ನಿತ್ಯ ಪೂಜಿಸ್ತಾನೆ ರಾಜುಸ್ವಾಮಿ.

2006ರಲ್ಲಿ ರಾಜು ಈ ದೇವಾಲಯ ನಿರ್ಮಾಣ ಮಾಡಿದ್ದಾನೆ. ಕಳೆದ 12 ವರ್ಷಗಳಿಂದ್ಲೂ ಪತ್ನಿಯನ್ನು ಆರಾಧಿಸುತ್ತಿದ್ದಾನೆ. ಇಲ್ಲಿ ರಾಜಮ್ಮಳ ಮೂರ್ತಿಯ ಜೊತೆಗೆ ಶನೀಶ್ವರ, ಸಿದ್ದಪ್ಪಾಜಿ, ನವಗ್ರಹ ಮತ್ತು ಶಿವನ ಮೂರ್ತಿಗಳನ್ನು ಕೂಡ ಪ್ರತಿಷ್ಠಾಪಿಸಲಾಗಿದೆ.

ರಾಜುಸ್ವಾಮಿಗೆ 3 ಎಕರೆ ಹೊಲವಿದೆ. ತನ್ನ ಸಹೋದರಿಯ ಮಗಳನ್ನೇ ಪ್ರೀತಿಸಿ ಮದುವೆಯಾಗಿದ್ದ ರಾಜು. ಮದುವೆಗೆ ಹೆತ್ತವರ ಸಮ್ಮತಿ ಇರಲಿಲ್ಲ. ಆದ್ರೆ ಅಕ್ಕ ಭಾವ ಒಪ್ಪಿ ಮದುವೆ ಮಾಡಿಕೊಟ್ಟಿದ್ರು. ಗ್ರಾಮದಲ್ಲಿ ದೇವಾಲಯ ಕಟ್ಟಬೇಕು ಅನ್ನೋ ಆಸೆಯನ್ನು ರಾಜಮ್ಮ ಪತಿಯ ಬಳಿ ಹೇಳಿಕೊಂಡಿದ್ಲು.

ಪತ್ನಿಯ ಆಸೆಯನ್ನು ಈಡೇರಿಸಲು ರಾಜು ದೇವಾಲಯ ನಿರ್ಮಾಣ ಆರಂಭಿಸಿದ್ದ. ಆದ್ರೆ ಅದು ಪೂರ್ಣಗೊಳ್ಳುವ ಮುನ್ನವೇ ರಾಜಮ್ಮ ತೀರಿಕೊಂಡ್ಲು. ಹಾಗಾಗಿ ಆತ ಪತ್ನಿಯ ಮೂರ್ತಿಯನ್ನೇ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುತ್ತಿದ್ದಾನೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...